ADVERTISEMENT

ನಾಮಪತ್ರ ಸಲ್ಲಿಕೆಗೆ ಪಕ್ಷೇತರರ ಲಗ್ಗೆ

50ಕ್ಕೂ ಅಧಿಕ ಸ್ವತಂತ್ರ ಅಭ್ಯರ್ಥಿಗಳಿಂದ ಉಮೇದುವಾರಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 20:06 IST
Last Updated 16 ಏಪ್ರಿಲ್ 2013, 20:06 IST

ಬೆಂಗಳೂರು: ಅಭ್ಯರ್ಥಿಗಳ ಪಾಲಿಗೆ ಶುಭದಿನ ಎನಿಸಿದ್ದ ಸೋಮವಾರ ಬೆಂಗಳೂರು ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ದಾಖಲೆ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾದರೆ, ಮಂಗಳವಾರ ಆ ಭರಾಟೆ ಕ್ಷೀಣಗೊಂಡಿತ್ತು. ಹೀಗಿದ್ದೂ 28 ಕ್ಷೇತ್ರಗಳಿಂದ ಒಟ್ಟಾರೆ 74 ನಾಮಪತ್ರಗಳು ಮಂಗಳವಾರ ಸಲ್ಲಿಕೆಯಾದವು.

ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಉಮೇದುವಾರಿಕೆ ದಾಖಲಿಸಿದ್ದು ವಿಶೇಷವಾಗಿತ್ತು. ಬಿಬಿಎಂಪಿ ಸೆಂಟ್ರಲ್ ವಿಭಾಗದಲ್ಲಿ 23, ಬಿಬಿಎಂಪಿ ಉತ್ತರ ವಿಭಾಗದಲ್ಲಿ 24, ಬಿಬಿಎಂಪಿ ದಕ್ಷಿಣ ವಿಭಾಗದಲ್ಲಿ 15 ಮತ್ತು ಬೆಂಗಳೂರು ನಗರ ವಿಭಾಗದಲ್ಲಿ 12 ನಾಮಪತ್ರಗಳು ಸಲ್ಲಿಕೆ ಆಗಿವೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಪೊಲೀಸರು ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ನಾಸಾ) ವಿಜ್ಞಾನಿಯಾಗಿದ್ದ ಡಾ. ಅಶ್ವಿನ್ ಮಹೇಶ್, ಲೋಕಸತ್ತಾ ಪಕ್ಷದಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. `ವಿಧಾನಸಭೆಗೆ ಹೋಗುವವರು ಸಮಸ್ಯೆ ನಿವಾರಕರು ಆಗಬೇಕೇ ಹೊರತು ಸಮಸ್ಯೆ ನಿರ್ಮಾಣ ಮಾಡುವವರಲ್ಲ. ಲೋಕಸತ್ತಾ ಪಕ್ಷ ಸಮಸ್ಯೆ ನಿವಾರಣೆ ಮಾಡುವವರನ್ನೇ ತನ್ನ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದೆ' ಎಂದು ಅಶ್ವಿನ್ ಹೇಳಿದರು. `ಮತದಾರರು ಪ್ರಜ್ಞಾವಂತರಾಗಿದ್ದು, ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ' ಎಂದು ತಿಳಿಸಿದರು.

ಸೋಮವಾರವೇ ಮಲ್ಲೇಶ್ವರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಂಗಳವಾರ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು.

ವಿವಿಧ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದವರ ವಿವರ ಹೀಗಿದೆ:
ಶಿವಾಜಿನಗರದಿಂದ ಶೇಕ್ ಬಹದ್ದೂರ್ (ಬಿಎಸ್‌ಪಿ), ಶಾಂತಿನಗರದಿಂದ ಆರ್.ವಿ. ರಮೇಶ್ ಯಾದವ್ (ಕೆಜೆಪಿ), ಎ.ಎಸ್. ರಾಜನ್, ಎಸ್.ಸುರೇಶ್ ಬಾಬು (ಪಕ್ಷೇತರ), ಗಾಂಧಿನಗರದಿಂದ ಆರ್.ಮೂರ್ತಿ, ವಿ.ನಾಗರಾಜ್ (ಪಕ್ಷೇತರ), ರಾಜಾಜಿನಗರದಿಂದ ಕೆ.ಮುನಿಸ್ವಾಮಿ, ಎಚ್.ಎನ್. ನಾಗರಾಜ್, ಪಿ.ಕೆ. ಪಾಟೀಲ್, ಎಸ್.ಎಂ. ಪ್ರಶಾಂತ್, ಆರ್.ಬಿ. ಶಿವಕುಮಾರ್, ಎಂ.ಕೆ. ವಿಜಯಕುಮಾರ್ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಚಾಮರಾಜಪೇಟೆಯಿಂದ ಕೆ.ಅಣ್ಣಪ್ಪ (ಪಕ್ಷೇತರ), ಚಿಕ್ಕಪೇಟೆಯಿಂದ ಖಮರ್ ತಾಜ್ (ಕೆಜೆಪಿ), ಅಬ್ದುಲ್ ಅಲೀಂ ತುರಬಿ, ಕುರಂ ಪಾಷಾ (ಪಕ್ಷೇತರ), ಕೆ.ಆರ್. ಪುರದಿಂದ ಗೌರಮ್ಮ , ಎಸ್.ಮುನಿರಾಜು (ಇಬ್ಬರೂ ಸಿಪಿಎಂ), ರವಿಪ್ರಕಾಶ್ (ಜೆಡಿಎಸ್), ಎನ್.ಬಸವರಾಜ್, ಡಿ.ಎಸ್. ಧನಂಜಯ್, ಶ್ರೀನಿವಾಸ್ (ಪಕ್ಷೇತರ), ಮಹಾಲಕ್ಷ್ಮಿ ಲೇಔಟ್‌ನಿಂದ ಎಲ್.ಲೋಕೇಶ್ (ಬಿಎಸ್‌ಪಿ), ಕೃಷ್ಣಮೂರ್ತಿ (ಬಿಎಸ್‌ಆರ್ ಕಾಂಗ್ರೆಸ್), ರಾಜಶ್ರೀ ಮುರಳೀಧರ್ (ಲೋಕಸತ್ತಾ), ಪಿ.ಕೆ. ಪಾಟೀಲ್, ಡಿ.ವಿಜಯಕುಮಾರ್ (ಪಕ್ಷೇತರ) ಉಮೇದುವಾರಿಕೆ ದಾಖಲಿಸಿದ್ದಾರೆ.

ಮಲ್ಲೇಶ್ವರದಿಂದ ಡಾ.ಸಿ.ಎನ್. ಅಶ್ವತ್ಥನಾರಾಯಣ (ಬಿಜೆಪಿ), ಎನ್.ಕುಮಾರ್ (ಕೆಜೆಪಿ), ಬಿ.ಟಿ. ಲಲಿತಾ ನಾಯಕ್, ಪ್ರಭಾಕರ್ (ಹಿಂದೂಸ್ತಾನ್ ನಿರ್ಮಾಣ ದಳ), ಹೆಬ್ಬಾಳದಿಂದ ಎಸ್.ಫಕ್ರುದ್ದೀನ್, ವಾಸೀಂ ಅಹ್ಮದ್ (ಎಸ್‌ಡಿಪಿಐ), ಪುಲಕೇಶಿನಗರದಿಂದ ಎ. ರಾಜಾ (ಅಂಬೇಡ್ಕರ್ ರಾಷ್ಟ್ರೀಯ ಕಾಂಗ್ರೆಸ್), ಎಂ. ಮೂರ್ತಿ (ಪಕ್ಷೇತರ), ಸರ್ವಜ್ಞನಗರದಿಂದ ಮಹ್ಮದ್ ಜಾವೇದ್ (ಎಸ್‌ಡಿಪಿಐ), ಡಾ. ಮೀರ್ ಹುಸೇನ್, ಮೋದಿ ಸೈಫುಲ್ಲಾ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಗೋವಿಂದರಾಜನಗರದಿಂದ ಸಿ.ಚಿಕ್ಕಣ್ಣ (ಬಿಎಸ್‌ಪಿ), ಬಸವನಗುಡಿಯಿಂದ ಪಿ.ಅರುಣಕುಮಾರ್, ಕೆ.ಎನ್. ಚಂದ್ರಶೇಖರ್, ಡಾ.ಕೆ.ವೆಂಕಟೇಶ್, ಎಲ್.ರಮೇಶ್, ಯೋಗೀಶ್ (ಪಕ್ಷೇತರ), ಬಿಟಿಎಂ ಲೇಔಟ್‌ನಿಂದ ಎ. ಹರಿರಾಮ್ (ಬಿಎಸ್‌ಪಿ), ಶ್ರೀನಿವಾಸ್ (ಕೆಜೆಪಿ), ಎಸ್.ಉಮೇಶ್ (ಎಸ್‌ಪಿ), ಮಹ್ಮದ್ ಸಾದಿಕ್ (ಪಕ್ಷೇತರ), ಜಯನಗರದಿಂದ ಮಹ್ಮದ್ ಕಲೀಂ (ಆರ್‌ಸಿಪಿ), ಎಂ.ಜಿ. ಜಕೀರ್ ಅಲಿ ಖಾನ್ (ಪಕ್ಷೇತರ), ಬೊಮ್ಮನಹಳ್ಳಿಯಿಂದ ಡಾ. ಅಶ್ವಿನ್ ಮಹೇಶ್ (ಲೋಕಸತ್ತಾ), ಯೋಗೇಶ್ ದೇವರಾಜ್ (ಪಕ್ಷೇತರ) ಉಮೇದುವಾರಿಕೆ ದಾಖಲಿಸಿದ್ದಾರೆ.

ಬ್ಯಾಟರಾಯನಪುರದಿಂದ ವಿ.ಸಿ. ಯೋಗಯ್ಯ (ಲೋಕಸತ್ತಾ), ಎಂ. ನಾಗರಾಜ್ (ಪಕ್ಷೇತರ), ಆರ್. ಗಂಗಾಧರ್ (ಬಿಎಸ್‌ಪಿ), ದಾಸರಹಳ್ಳಿಯಿಂದ ಆರ್. ಗಂಗಾಧರ್ (ಬಿಎಸ್‌ಪಿ), ಪಿ.ಎನ್. ಕೆಂಪರಾಜು, ಆರ್. ಮಂಜುನಾಥ್, ಎನ್.ಪೂರ್ಣಿಮಾ, ಎಂ.ಜುಬೇರ್ ಅಹ್ಮದ್ (ಪಕ್ಷೇತರ), ಮಹದೇವಪುರದಿಂದ ಎನ್.ವೆಂಕಟೇಶ್ (ಬಿಎಸ್‌ಪಿ), ಎಂ. ಪ್ರಸನ್ನ (ಪಕ್ಷೇತರ), ಬೆಂಗಳೂರು ದಕ್ಷಿಣದಿಂದ ಸುಷ್ಮಾ ರೆಡ್ಡಿ (ಕಾಂಗ್ರೆಸ್), ಆನೇಕಲ್‌ನಿಂದ ಟಿ. ಚಂದ್ರಪ್ಪ (ಭಾರತೀಯ ಪ್ರಜಾ ಪಕ್ಷ), ಜಿ.ಎಂ. ಗೋಪಿನಾಥ್ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.