ADVERTISEMENT

ನಾಳೆ ಫ್ಯಾಷನ್ ಶೋ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಬೆಂಗಳೂರು: ಯುವಕರು, ಮಧ್ಯ ವಯಸ್ಕರ ಪ್ರತಿಭೆ ಗುರುತಿಸಿ, ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ ಜೂ. 27ರಂದು ಸಂಜೆ 6ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಬಿ.ಚಿನ್ನಪ್ಪ ಅವರ ಗ್ಲಾಮ್‌ಗಾಡ್ ಫ್ಯಾಷನ್, ಭೀರ್ಯ ಫ್ರಾಂಚೈಸಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫ್ಯಾಷನ್ ಶೋ, ನೃತ್ಯ, ದೇಹದಾರ್ಢ್ಯ ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತೂ ಅರಿವು ಮೂಡಿಸಲಾಗುವುದು ಎಂದರು. ಒಂದು ವರ್ಷದಿಂದ ರಾಜ್ಯದ ವಿವಿಧೆಡೆ ನಡೆಸಲಾದ `ಟ್ಯಾಲೆಂಟ್ ಹಂಟ್' ಕಾರ್ಯಕ್ರಮದ ಮೂಲಕ 60 ಜನರ ತಂಡವನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರಾದ ವಿ.ರವಿಚಂದ್ರನ್, ಸುದೀಪ್, ವಿಜಯ್ ರಾಘವೇಂದ್ರ, ತಾರಾ ಅನೂರಾಧ, ಜಯಮಾಲಾ, ಸುಧಾರಾಣಿ ಇತರರು ಭಾಗವಹಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.