ADVERTISEMENT

ನಾಳೆ ಬೆಂಗಳೂರು ಮಹಾ ಧರ್ಮಕ್ಷೇತ್ರ ವಜ್ರಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಬೆಂಗಳೂರು ಮಹಾ ಧರ್ಮಕ್ಷೇತ್ರವು ಭಾನುವಾರ (ಸೆ. 22) ಬೆಳಿಗ್ಗೆ 10 ಗಂಟೆಗೆ ಕೋಲ್ಸ್ ಪಾರ್ಕ್ ಬಳಿ ಇರುವ ಸಂತ ಫ್ರಾನ್ಸಿಸ್ ಕ್ಲೇವಿಯರ್ ಪ್ರಧಾನಾಲಯದಲ್ಲಿ ವಜ್ರ ಮಹೋತ್ಸವ ಸಮಾರಂಭ ಹಮ್ಮಿಕೊಂಡಿದೆ.

ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಬರ್ನಾಡ್ ಮೊರಾಸ್, ‘ಬೆಂಗಳೂರು ಮಹಾ ಧರ್ಮಕ್ಷೇತ್ರವು ಮೈಸೂರು ಧರ್ಮ ಪ್ರಚಾರ ಪ್ರಾಂತ್ಯದ ಭಾಗವಾಗಿತ್ತು. ರಾಜಧಾನಿಯ ಧರ್ಮಾಕ್ಷೇತ್ರವೂ ತನ್ನದೇ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ಹೊಸ ದಿಕ್ಕು ಕಂಡುಕೊಂಡಿದೆ. ಈಗ ವಜ್ರ ಮಹೋತ್ಸವನ್ನು ಆಚರಿಸುತ್ತಿರು ವುದು ಸಂತಸ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ದಿನಾಚರಣೆಯ ಪ್ರಯುಕ್ತ ಕಾರ್ಯನಿರ್ವಹಿಸಿದ್ದ ಎಲ್ಲ ಧರ್ಮ ಗುರುಗಳನ್ನು ನೆನೆದು ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸ ಲಾಗುವುದು. ಅಲ್ಲದೇ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದ್ದು, ವಿಶ್ವಗುರು ಪೋಪ್ ಫ್ರಾನ್ಸಿಸ್ ಭಾರತದ ರಾಯಭಾರಿ  ಡಾ.ಸಾಲ್ವ ತೋರೆ ಪೆನ್ನಾಕಿಯೊ ಅವರು ಭಾಗವಹಿಸಲಿದ್ದಾರೆ ’ ಎಂದು  ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.