ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿನ `ನಿತ್ಯಾನಂದ ಧ್ಯಾನಪೀಠ~ಕ್ಕೆ ಬೀಗಮುದ್ರೆ ಹಾಕಲು ಮುಖ್ಯಮಂತ್ರಿಗಳು ಕಾನೂನು ಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಎಂದು ದೂರಿ ಸರ್ಕಾರದಿಂದ 10 ಕೋಟಿ ರೂಪಾಯಿ ಪರಿಹಾರದ ಬೇಡಿಕೆ ಒಡ್ಡಿ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಮನವಿಯನ್ನಿಟ್ಟು ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಆದೇಶಿಸಿದ್ದಾರೆ. ಧ್ಯಾನಪೀಠಕ್ಕೆ ಬೀಗಮುದ್ರೆ ಹಾಕಿದ್ದನ್ನೂ ಸ್ವಾಮಿ ಪ್ರಶ್ನಿಸಿದ್ದರು. ಆದರೆ ಬೀಗಮುದ್ರೆಯನ್ನು ಬಹಳ ಮುಂಚೆಯೇ ಸರ್ಕಾರ ತೆಗೆದಿರುವುದು ಕೂಡ ನ್ಯಾಯಮೂರ್ತಿಗಳ ಗಮನಕ್ಕೆ ಬಂತು. ಇದಕ್ಕೂ ಮಾನ್ಯತೆ ಇಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.