ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ನಗರಸಭೆ ಮತ್ತು ಪುರಸಭೆ ಪ್ರದೇಶಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ಸಲುವಾಗಿ ಇದೇ ತಿಂಗಳ 17ರಿಂದ 29ರವರೆಗೆ ವಿವಿಧ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ಹಮ್ಮಿಕೊಂಡಿದೆ.
ಈ ಶಿಬಿರಗಳಲ್ಲಿ ಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಳ್ಳಲಿದ್ದು, ಸಂಪರ್ಕ ಪಡೆಯಲು ಇಚ್ಛಿಸುವವರಿಗೆ ಸ್ಥಳದಲ್ಲಿಯೇ ಅರ್ಜಿ ನಮೂನೆಗಳನ್ನು 100 ರೂಪಾಯಿ ಅರ್ಜಿ ಶುಲ್ಕ ಪಡೆದು ವಿತರಿಸಲಿದ್ದಾರೆ. `ಸಜಲ~ ಎಂಬ ಅರ್ಜಿನಮೂನೆ ಕೈಪಿಡಿ ಸರಳವಾಗಿದ್ದು, ಗ್ರಾಹಕರಿಗೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿದೆ. ಅಂದರೆ, ವಿವಿಧ ಗಾತ್ರದ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸಲ್ಲಿಸಬೇಕಾದ ಠೇವಣಿ ಹಾಗೂ ಇತರೆ ಶುಲ್ಕದ ವಿವರಗಳು ಇದರಲ್ಲಿ ಲಭ್ಯ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆ ಹಾಗೂ ಶುಲ್ಕದೊಂದಿಗೆ ಸಲ್ಲಿಸಿದಲ್ಲಿ ಒಂದು ವಾರದೊಳಗೆ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಮಂಜೂರು ಮಾಡಲಾಗುತ್ತದೆ.
ವಿಶೇಷ ಶಿಬಿರಗಳು ನಡೆಯುವ ಸ್ಥಳ ಮತ್ತು ದಿನಾಂಕಗಳು ಈ ಕೆಳಗಿನಂತಿವೆ. ಶಿಬಿರ ನಡೆಯುವ ದಿನಾಂಕ, ಸಮಯ, ಸ್ಥಳ ಹಾಗೂ ಪಾಲಿಕೆ ವಾರ್ಡ್ ಸಂಖ್ಯೆಗಳನ್ನು (ಆವರಣದಲ್ಲಿ) ಈ ಕೆಳಗೆ ನೀಡಲಾಗಿದೆ.
ಆಗಸ್ಟ್ 17 ಮತ್ತು 18 (ಸಮಯ: ಬೆಳಿಗ್ಗೆ 10ರಿಂದ ಸಂಜೆ 4): ಮೆಕ್ಕಾ ಮಸೀದಿ: ಮಂಗಮ್ಮನಪಾಳ್ಯ (ವಾರ್ಡ್ ನಂ.190); ಬಿಬಿಎಂಪಿ ವಾರ್ಡ್ ಕಚೇರಿ- ಎಂಇಐ ಕಾಲೋನಿ (41); ಬಿಬಿಎಂಪಿ ವಾರ್ಡ್ ಕಚೇರಿ, ಹೆಗ್ಗನಹಳ್ಳಿ (71); ಪಟ್ಟಣಗೆರೆ ಸರ್ಕಾರಿ ಶಾಲೆ (198); ವಾರ್ಡ್ ಕಚೇರಿ, ಹೊರ ವರ್ತುಲ ರಸ್ತೆ (130);
ಸರ್ಕಾರಿ ಶಾಲೆ, ಕಟ್ಟಿಗೆಪಾಳ್ಯ (73); ಅಂಬೇಡ್ಕರ್ ಕ್ರೀಡಾಂಗಣ, ನಾಗವಾರ (24); ಬಿಬಿಎಂಪಿ ಕಚೇರಿ, ಯಮಲೂರು (86); ಎಚ್‌ಎಎಲ್ ವಾರ್ಡ್ ಬಿಬಿಎಂಪಿ ಕಚೇರಿ, ವೈಟ್‌ಫೀಲ್ಡ್ (87); 6ನೇ ಅಡ್ಡ ರಸ್ತೆ, ಜನತಾ ಕಾಲೋನಿ, ಅರಕೆರೆ (193); ಇಲಿಯಾಸ್ ನಗರ ಮುಖ್ಯ ರಸ್ತೆ (185); ಯಲಹಂಕ ನ್ಯೂ ಟೌನ್ (34); ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಉತ್ತರ-1 ವಲಯ ಕಚೇರಿ (12 ಮತ್ತು 13); ಸರ್ಕಾರಿ ಪ್ರಾಥಮಿಕ ಶಾಲೆ, ನಾಗವಾರ (6).
22 ಮತ್ತು 23 (ಸಮಯ: ಬೆಳಿಗ್ಗೆ 10ರಿಂದ ಸಂಜೆ 4): ಹೊಸಪಾಳ್ಯ (190); ಬಿಬಿಎಂಪಿ ವಾರ್ಡ್ ಕಚೇರಿ, ಲಕ್ಷ್ಮಿದೇವಿ ನಗರ (42); ಸರ್ಕಾರಿ ಶಾಲೆ ಆವರಣ, ಲಗ್ಗೆರೆ (69); ಸರ್ಕಾರಿ ಶಾಲೆ, ಬಂಗಾರಪ್ಪ ನಗರ (160); ಗೌರವ ಸದನ ಸಮುದಾಯ ಭವನ, ಜ್ಞಾನಜ್ಯೋತಿ ನಗರ (129); ಬಿಡಿಎ ಕಾಂಪ್ಲೆಕ್ಸ್, ಎಚ್‌ಬಿಆರ್ ಲೇ ಔಟ್ (24); ವರ್ತುಲ ರಸ್ತೆ ಮಲ್ಟಿಪ್ಲೆಕ್ಸ್ ಎದುರು, ಮುನ್ನೆಕೋಳಾಲು (150);
ಬಿಬಿಎಂಪಿ ವಾರ್ಡ್ ಕಚೇರಿ ,ವಿಜ್ಞಾನ ನಗರ (81); ಸಮುದಾಯ ಭವನ, ಹೊಂಗಸಂದ್ರ (189); ಗಣಪತಿ ದೇವಾಲಯ, ಯಲಚೇನಹಳ್ಳಿ, ಕನಕನಗರ (185); ಸಹಕಾರ ನಗರ ಸೇವಾ ಠಾಣೆ (78); ವಿದ್ಯಾರಣ್ಯಪುರ ಸೇವಾ ಠಾಣೆ (9, 10, 11).
24 ಮತ್ತು 25 (ಬೆಳಿಗ್ಗೆ 10ರಿಂದ ಸಂಜೆ 4): ರಾಜೀವ್‌ಗಾಂಧಿ ನಗರ (174); ಬಿಬಿಎಂಪಿ ಕಚೇರಿ, ಎಚ್‌ಎಂಟಿ ಲೇಔಟ್ (39); ನೀರಿನ ಟ್ಯಾಂಕ್ ಆವರಣ, ಜಿಕೆಡಬ್ಲ್ಯೂ ಲೇ ಔಟ್ (70);
ವಾರ್ಡ್ ಕಚೇರಿ, ಹೊರ ವರ್ತುಲ ರಸ್ತೆ ಸಮೀಪ (129); ಕೆಂಗೇರಿ ಸೇವಾ ಠಾಣೆ (159); ಸರ್ಕಾರಿ ಶಾಲೆ, ಚನ್ನಸಂದ್ರ (160); ಬಿಆರ್ ಫಂಕ್ಷನ್ ಹಾಲ್, ಗೋವಿಂದಪುರ ಮುಖ್ಯ ರಸ್ತೆ (23); ಸರ್ಕಾರಿ ಶಾಲೆ, ಮುನ್ನೆಕೋಳಾಲು (149); ಬಿಬಿಎಂಪಿ ವಾರ್ಡ್ ಕಚೇರಿ, ಎ. ನಾರಾಯಣಪುರ (56); ಸರ್ಕಾರಿ ಶಾಲೆ, ಹೂಡಿ (54); ರೆಡ್ಡಿ ಶಾಲೆ, ರೂಪೇನಅಗ್ರಹಾರ (175); ಸರ್ಕಾರಿ ಶಾಲೆ, ಸೋಮೇಶ್ವರ ಬಡಾವಣೆ (188); ಗಣಪತಿ ದೇವಸ್ಥಾನ, ಕಾಶಿನಗರ (185); ಬಿಬಿಎಂಪಿ ಕಚೇರಿ, ಸೌದಾಮಿನಿ ಬಡಾವಣೆ (197); ಹಳೆಯ ಸಿಎಂಸಿ ಕಚೇರಿ (12); ಎಂಇಐ ಬಡಾವಣೆ ಸೇವಾ ಠಾಣೆ (14 ಮತ್ತು 15).
28 ಮತ್ತು 29 (ಬೆಳಿಗ್ಗೆ 10ರಿಂದ ಸಂಜೆ 4): ಚನ್ನಕೇಶವ ನಗರ, ಸಿಂಗಸಂದ್ರ (191); ವಾರ್ಡ್ ಕಚೇರಿ, ಲಗ್ಗೆರೆ ಮುಖ್ಯ ರಸ್ತೆ (73); ಒಳವರ್ತುಲ ರಸ್ತೆ, ವೈಟ್ ಫೀಲ್ಡ್ (84); ಸರ್ಕಾರಿ ಶಾಲೆ, ಕವಡೇನಹಳ್ಳಿ (26); ಸರ್ಕಾರಿ ಕಾಲೇಜು, ಕೆ.ಆರ್.ಪುರಂ (52); ಜ್ಯೂಬಿಲಿ ಶಾಲೆ, ವಿಜಿನಾಪುರ (51); ಸರ್ಕಾರಿ ಪ್ರಾಥಮಿಕ ಶಾಲೆ ಜಕ್ಕೂರು (5); ಮೈಲಸಂದ್ರ, ಎಸ್‌ಟಿಪಿ (198); ಬಿಬಿಎಂಪಿ ವಾರ್ಡ್ ಕಚೇರಿ, ಕೆಂಗೇರಿ (159).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.