ADVERTISEMENT

ನೆಲಮಂಗಲ: ಉಚಿತ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 18:45 IST
Last Updated 11 ನವೆಂಬರ್ 2012, 18:45 IST

ನೆಲಮಂಗಲ: `ನೆಲಮಂಗಲ ಭಾಗದ ಕಾರ್ಮಿಕರು ರಾಜಾಜಿನಗರ ಇಎಸ್‌ಐ ಆಸ್ಪತ್ರೆಗೆ ಹೋಗುವ ಬದಲು ಇಲ್ಲಿಗೆ ಸಮೀಪದ ಪೀಣ್ಯ ಇಎಸ್‌ಐ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬಹುದು. ಪೀಣ್ಯ ಆಸ್ಪತ್ರೆ ಸಹ ಎಲ್ಲ ಅಗತ್ಯ ಸೌಲಭ್ಯಗಳನ್ನು ಹೊಂದಿದೆ~ ಎಂದು ಸಹಾಯಕ ಮೆಡಿಕಲ್ ಸರ್ಜನ್ ಡಾ.ಸುನೀಲ್ ತಿಳಿಸಿದರು.

ತಾಲ್ಲೂಕಿನ ಜಾಸ್ ಟೋಲ್ ಸಂಸ್ಥೆಯು ತನ್ನ ಸಿಬ್ಬಂದಿ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಗೆ ಇಎಸ್‌ಐ ಆಸ್ಪತ್ರೆಯ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಟೋಲ್‌ನ ರಕ್ಷಣಾ ಅಧಿಕಾರಿ ಜಯರಾಜ್‌ಶೆಟ್ಟಿ, ಟೋಲ್ ವಿಭಾಗದ ಮುಖ್ಯಸ್ಥ ಎಂ.ಎ.ನಾಣಯ್ಯ, ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್, ಅಧಿಕಾರಿ ಬಸವರಾಜು ಉಪಸ್ಥಿತರಿದ್ದರು. 10 ವೈದ್ಯರ ನೇತೃತ್ವದ ತಂಡವು ಶಿಬಿರವನ್ನು ನಡೆಸಿಕೊಟ್ಟಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.