ADVERTISEMENT

ನ.1 ರಂದು ನೊಬೆಲ್‌ ವಿಜೇತ ಜೊಷಿಮ್ ಫ್ರಾಂಕ್ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:27 IST
Last Updated 25 ಅಕ್ಟೋಬರ್ 2017, 19:27 IST
ನ.1 ರಂದು  ನೊಬೆಲ್‌ ವಿಜೇತ ಜೊಷಿಮ್ ಫ್ರಾಂಕ್ ಉಪನ್ಯಾಸ
ನ.1 ರಂದು ನೊಬೆಲ್‌ ವಿಜೇತ ಜೊಷಿಮ್ ಫ್ರಾಂಕ್ ಉಪನ್ಯಾಸ   

ಬೆಂಗಳೂರು: ಪ್ರಸಕ್ತ ಸಾಲಿನ ರಸಾಯನ ಶಾಸ್ತ್ರದ ನೊಬೆಲ್‌ ಪುರಸ್ಕೃತ ವಿಜ್ಞಾನಿ ಜೊಷಿಮ್ ಫ್ರಾಂಕ್ ನವೆಂಬರ್‌ 1 ರಂದು ನಗರದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಜೊಷಿಮ್ ಫ್ರಾಂಕ್ ಜಾಕ್ವೇಸ್‌ ಡ್ಯುಬೊಚೆಟ್‌ ಮತ್ತು ರಿಚರ್ಡ್ ಹೆಂಡರ್ಸನ್‌ ಅವರ ಜತೆ ಕ್ರೆಯೊ– ಎಲೆಕ್ಟ್ರಾನ್‌ ಮೈಕ್ರೊಸ್ಕೊಪಿ ಅಭಿವೃದ್ಧಿ ಪಡಿಸಿದ ಕಾರಣಕ್ಕೆ ನೊಬೆಲ್‌ ಪಡೆದಿದ್ದಾರೆ. ಮೈಕ್ರೊಸ್ಕೊಪಿಯಿಂದ ಅತಿ ಸುಲಭವಾಗಿ ಜೈವಿಕ ಆಣ್ವಿಕಗಳ ದೃಶ್ಯ ಸೆರೆ ಹಿಡಿಯಲು ಸಾಧ್ಯ. ಇದು ಜೈವಿಕ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ಹೆಸರಘಟ್ಟ ಹೋಬಳಿ ಶಿವಕೋಟೆಯಲ್ಲಿರುವ ಸೈದ್ಧಾಂತಿಕ ವಿಜ್ಞಾನಗಳ ಅಂತರ ರಾಷ್ಟ್ರೀಯ ಕೇಂದ್ರದಲ್ಲಿ (ಐಸಿಟಿಎಸ್‌) ಸಂಜೆ 4 ರಿಂದ 5.30 ರವರೆಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಐಸಿಟಿಎಸ್‌, ಸರ್ವೇ ನಂ 151, ಶಿವಕೋಟೆ, ಹೆಸರಘಟ್ಟ ಹೋಬಳಿ, ಬೆಂಗಳೂರು 560089.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.