ADVERTISEMENT

ಪದ್ಮಾವತಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಹೊಸಕೋಟೆ: ತಾಲ್ಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪದ್ಮಾವತಿ ವೆಂಕಟರಮಣಪ್ಪ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್.ಸಿ.ಕಾಂತರಾಜು ಅವರು 14 ಮತಗಳಿಸಿ ವಿಜೇತರಾದರೆ, ಪ್ರತಿಸ್ಪರ್ಧಿ ಶ್ರೀನಿವಾಸ್ ಅವರಿಗೆ ಏಳು ಮತಗಳು ದೊರಕಿದವು. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.

ಆಯ್ಕೆ: ತಾಲ್ಲೂಕಿನ ನಂದಗುಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳಾಗಿ ಅಕ್ಕಯ್ಯಮ್ಮ, ಬಸವರಾಜ್, ಮುನಿಯಪ್ಪ, ಎಂ.ನಾಗರಾಜ್, ನಾರಾಯಣಪ್ಪ, ಸಿ.ವೆಂಕಟೇಶ್, ವೆಂಕಟೇಶ್, ಮುನಿಯಪ್ಪ ಮತ್ತು ಗೌರಮ್ಮ ಆಯ್ಕೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.