ADVERTISEMENT

ಪರಿಸರ ಪ್ರಜ್ಞೆ ಜಾಗೃತವಾಗಲಿ: ಜರಗನಹಳ್ಳಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:34 IST
Last Updated 4 ಸೆಪ್ಟೆಂಬರ್ 2013, 19:34 IST

ನೆಲಮಂಗಲ: ಅಳಿವಿನ ಅಂಚಿನಲ್ಲಿರುವ ಸಸ್ಯಸಂಕುಲವನ್ನು ಸಂರಕ್ಷಿಸುವ ಹೊಣೆಯನ್ನು ವಿದ್ಯಾರ್ಜನೆಯೊಂದಿಗೆ ಬೆಳೆಸಿಕೊಳ್ಳಬೇಕು ಎಂದು ಕವಿ ಜರಗನಹಳ್ಳಿ ಶಿವಶಂಕರ್ ಸಲಹೆ ನೀಡಿದರು.

ಸ್ಥಳೀಯ ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಸೈನಿಕ ದಳ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಸಸಿ ನೆಟ್ಟು ಉದ್ಘಾಟಿಸಿ ಮಾತನಾಡಿದರು.

ಯೋಜನಾಧಿಕಾರಿ ಪ್ರೊ.ಸಿ.ಗಂಗರಾಜು ಮಾತನಾಡಿದರು. ಎನ್‌ಸಿಸಿ ಅಧಿಕಾರಿ ಪ್ರೊ.ಕೆ.ಎನ್.ಅಮರೇಂದ್ರ ಶಿಸ್ತು ಸಂಯಮದ ಮಹತ್ವ ವಿವರಿಸಿದರು. ಪ್ರೊ.ಬಿ.ಎಂ.ಮಾಲಿನಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಅಗತ್ಯದ ವಿವರ ನೀಡಿದರು.

ಪ್ರಾಂಶುಪಾಲ ಸಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದು ವಿದ್ಯಾರ್ಥಿಗಳು ವಿವೇಕಶಾಲಿಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ತಿಳಿಸಿದರು. ಗ್ರಂಥಾಧಿಕಾರಿ ಎಂ.ಸಿ.ಪಾಟೀಲ್, ಉಪನ್ಯಾಸಕ ಪ್ರಕಾಶ್ ವೇದಿಕೆಯಲ್ಲಿದ್ದರು. ಪ್ರೊ.ಎನ್. ಪ್ರಸನ್ನಕುಮಾರ್ ಸ್ವಾಗತಿಸಿ, ಬಿ.ಎಂ.ದೀಪಿಕಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.