ADVERTISEMENT

ಪವನ್‌ಕುಮಾರ್ ಶವ ನಗರಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:20 IST
Last Updated 10 ಜುಲೈ 2012, 19:20 IST

ಬೆಂಗಳೂರು: ಅಮೆರಿಕದಲ್ಲಿ ಸಾವನ್ನಪ್ಪಿದ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪವನ್‌ಕುಮಾರ್ ಶವವನ್ನು ಮಂಗಳವಾರ ರಾತ್ರಿ ನಗರಕ್ಕೆ ತರಲಾಯಿತು.

`ಶವವನ್ನು ನಗರಕ್ಕೆ ತರಿಸುವ ಸಂಬಂಧ ಕೆಲ ದಾಖಲೆ ಪತ್ರಗಳಿಗೆ  ಶುಕ್ರವಾರ (ಜು 6) ಸಹಿ ಮಾಡಿ ನ್ಯೂಜೆರ್ಸಿಗೆ ಕಳುಹಿಸಿಲಾಗಿತ್ತು. ಭಾನುವಾರ ಆ ದಾಖಲೆ ಪತ್ರಗಳು ನ್ಯೂಜೆರ್ಸಿ ಪೊಲೀಸರ ಕೈಸೇರಿತ್ತು.

ಎಲ್ಲಾ ಪ್ರಕ್ರಿಯೆ ಮುಗಿದು ಪವನ್ ಮೃತದೇಹ 12 ಗಂಟೆ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

`ಆರ್.ಟಿ. ನಗರದಲ್ಲಿರುವ ಪವನ್ ಅಕ್ಕ ಗುಣಶೀಲಾರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ~ ಎಂದರು.  `ಪವನ್‌ನ ಪಾಸ್‌ಪೋರ್ಟ್ ಮತ್ತು ಮರಣ ದೃಢೀಕರಣ ಪತ್ರವನ್ನು ಏರ್‌ಲೈನ್ಸ್ ಅಧಿಕಾರಿಗಳು ನೀಡಿದ್ದಾರೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿದ್ದ ಎನ್ನಲಾದ ಪತ್ರ ಕೈಸೇರಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.