ADVERTISEMENT

ಪುರಸಭೆಗೆ ಸಾರ್ವಜನಿಕರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ನೆಲಮಂಗಲ: `ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪುರಸಭೆಯು ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದರಿಂದ ಪ್ರಸನ್ನಾಂಜನೇಯ ಟ್ರಸ್ಟ್ ಬಡವಾಣೆಯ ನೂರಾರು ನಿವಾಸಿಗಳು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಆರೋಪಿಸಿ ಸಾರ್ವಜನಿಕರು ಪುರಸಭೆಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

`1986ರಲ್ಲಿ ಪುರಸಭೆಯು ಬಡಾವಣೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಬಡಾವಣೆ ನಿರ್ಮಿಸುವ ಮತ್ತು ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಪ್ರಸನ್ನಾಂಜನೇಯ ಟ್ರಸ್ಟಿಗೆ ನೀಡಿತ್ತು. ಯೋಜನೆಗೆ ಅನುಗುಣವಾಗಿ ಟ್ರಸ್ಟ್ ಪುರಸಭೆ ವ್ಯಾಪ್ತಿಯ ಸರ್ವೆ ನಂ 214ರಿಂದ 220ರವರೆಗೆ ಹಾಗೂ ಜಕ್ಕಸಂದ್ರದ 8/3ರಲ್ಲಿನ 35 ಎಕರೆ ಜಮೀನನ್ನು ಭೂಸ್ವಾಧಿನ ಮಾಡಿಕೊಂಡು ಭೂಮಾಲೀಕರಿಗೆ ಪರಿಹಾರ ನೀಡಿ 666 ನಿವೇಶನಗಳನ್ನು ನಿರ್ಮಿಸಿತ್ತು. 150 ನಿವೇಶನಗಳನ್ನು ಪುರಸಭೆಗೆ ನೀಡಲಾಗಿತ್ತು~ ಎಂದು ಟ್ರಸ್ಟಿನ ಕಾರ್ಯದರ್ಶಿ ಎಚ್.ಜಿ.ರಾಜು ತಿಳಿಸಿದರು.

`ಜಮೀನು ಕಳೆದುಕೊಂಡ ಕುಟುಂಬದವರು ಈಚೆಗೆ ನ್ಯಾಯಾಲಯಕ್ಕೆ ಮೊರೆಹೋದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ಸಲ್ಲಿಸುವಂತೆ ಪುರಸಭೆಗೆ ಸೂಚಿಸಲಾಗಿತ್ತು. ಆದರೆ, ಪುರಸಭೆಯು ವಾಸ್ತವ ಮಾಹಿತಿ ನೀಡಿದ ಕಾರಣ ನ್ಯಾಯಾಲಯವು ಪ್ರಸನ್ನಾಂಜನೇಯ ಟ್ರಸ್ಟ್‌ನ ವತಿಯಿಂದ ವಿತರಣೆಯಾದ ಎಲ್ಲ ನಿವೇಶನಗಳು ಅನೂರ್ಜಿತವೆಂದು ಪರಿಗಣಿಸಿ ಭೂಮಾಲೀಕರ ಪರವಾಗಿ ಆದೇಶ ಹೊರಡಿಸಿದೆ. ಇದರಿಂದಾಗಿ ನಿವೇಶನದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ~ ರಾಜಕುಮಾರ್ ಸಂಘದ ಅಧ್ಯಕ್ಷ ಚನ್ನಪ್ಪ ದೂರಿದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ಬೈರೇಗೌಡ, ಸುರೇಶ, ಹನುಮಂತಯ್ಯ, ಕುಮಾರಯ್ಯ, ಶಿವಕುಮಾರ್ ಮತ್ತು ಗುಂಡಾ ಭಟ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.