ADVERTISEMENT

ಪ್ರಕರಣ: ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:21 IST
Last Updated 10 ಮಾರ್ಚ್ 2014, 20:21 IST

ಬೆಂಗಳೂರು: ಆರತಿ ರಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ­ದಂತೆ ನಿತ್ಯಾನಂದ ವಿರುದ್ಧ ‘ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌’ ನೇಮಕಕ್ಕೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಪ್ರಕರಣದ ಮೂರನೇ ಆರೋಪಿ ವಲ್ಲಭ ನೇನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತಡೆಯಾಜ್ಞೆ ನೀಡಿದೆ.  ಆರತಿ ರಾವ್ ಅವರ ಮೇಲಿನ ಅತ್ಯಾಚಾರ ಆರೋಪದ ಸಂಬಂಧ ನಿತ್ಯಾನಂದ ವಿರುದ್ಧ ಸರ್ಕಾರ ಗೋವಿಂದನ್ ಎಂಬುವರನ್ನು ‘ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌’ ಆಗಿ ನೇಮಕ ಮಾಡಿತ್ತು.

ಇದು ಖಾಸಗಿ ದೂರಾಗಿದ್ದು, ಈ ಪ್ರಕರಣದಲ್ಲಿ ‘ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌’ ಅವರನ್ನು ನೇಮಿಸಲು ಅವಕಾಶ ಇಲ್ಲ ಎಂದು ವಲ್ಲಭ ನೇನಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.