ಭಾರದ ಮಿತಿ ಹೆಚ್ಚಿಸಿ
‘ಈ ಭಾಗದಲ್ಲಿ ಮೆಟ್ರೊ ಸೇವೆ ಆರಂಭವಾಗಿರುವುದು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ರೈಲಿನಲ್ಲಿ 15 ಕೆ.ಜಿ.ವರೆಗೆ ಮಾತ್ರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಿತಿ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಇತರ ಸ್ಥಳಗಳಿಗೆ ತೆರಳುವಾಗ, ಮಾರುಕಟ್ಟೆಗೆ ಹೋಗುವಾಗ ಹೆಚ್ಚು ಭಾರ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಮಿತಿಯನ್ನು ಹೆಚ್ಚಿಸಬೇಕು.
–ಶ್ರೀಕಾಂತ್ ಎಂಜಿನಿಯರ್, ಬಸವೇಶ್ವರನಗರ
ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ
ಮೆಟ್ರೊ ಸೇವೆ ಆರಂಭ ಆಗಿರುವುದು ವಾಹನ ದಟ್ಟಣೆ ಇಲ್ಲದೆ ಬೇಗ ತಲುಪಬಹುದು. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮಾಲಿನ್ಯವೂ ಇರುವುದಿಲ್ಲ.
–ಐಶ್ವರ್ಯ ಎಂಜಿನಿಯರಿಂಗ್ ವಿದ್ಯಾರ್ಥಿನಿ, ಮಹಾಲಕ್ಷ್ಮಿ ಲೇಔಟ್
ಸಮಯ ಉಳಿತಾಯ
ಪೀಣ್ಯದಿಂದ ಸಂಪಿಗೆ ರಸ್ತೆಗೆ 19 ನಿಮಿಷದಲ್ಲಿ ಬಂದಿದ್ದೇವೆ. ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರದಲ್ಲಿ ಸಂಬಂಧಿಕರಿದ್ದಾರೆ. ಈ ಎಲ್ಲ ಕಡೆಗೂ ಸುಲಭವಾಗಿ ಸಂಚರಿಸಬಹುದಾಗಿದೆ.
–ಆರತಿ ಸಂತೋಷ್ ಗೃಹಿಣಿ, ಲಗ್ಗೆರೆ
ಕಾಮಗಾರಿ ಪೂರ್ಣಗೊಳ್ಳಬೇಕು
ನಗರದ ಇನ್ನೂ ಹಲವು ಭಾಗಗಳಲ್ಲಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕಡೆಗೂ ಕಾಮಗಾರಿ ಪೂರ್ಣಗೊಂಡರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಸೇವೆಯಿಂದಾಗಿ ಹೆಚ್ಚು ಸಮಯ ಉಳಿತಾಯವಾಗುತ್ತದೆ.
–ನಂದಿನಿ ಸಾಫ್ಟ್‌ವೇರ್ ಎಂಜಿನಿಯರ್, ಯಲಹಂಕ
ಹುಬ್ಬಳ್ಳಿಯಿಂದ ಬಂದೆ
ಎಂ.ಜಿ.ರಸ್ತೆಯಲ್ಲಿ ಮೆಟ್ರೊ ಸೇವೆ ಆರಂಭವಾದಾಗ ಬರಲು ಸಾಧ್ಯವಾಗಿರಲಿಲ್ಲ. ವಿದೇಶದಲ್ಲಿ ಇಂತಹ ಸೇವೆ ಇರುವುದನ್ನು ನೋಡಿದ್ದೇವೆ. ಈ ಸೇವೆ ಸಿಗುತ್ತಿರುವುದು ಖುಷಿ ತಂದಿದೆ. ಹುಬ್ಬಳ್ಳಿಯಿಂದ ಮೆಟ್ರೊ ನೋಡಲು ಬಂದಿದ್ದೇನೆ.
–ಕೃಷ್ಣ ಖಾಸಗಿ ಉದ್ಯೋಗಿ.
ಸುಲಭವಾಗಿ ತಲುಪಬಹುದು
ನಗರದಲ್ಲಿ ಮೊದಲು ಮೆಟ್ರೊ ಸೇವೆ ಆರಂಭವಾದಾಗ ಪ್ರಯಾಣಿಸಿದ್ದೆ. ಈ ಸೇವೆಯಿಂದಾಗಿ ನಗರದ ವಿವಿಧ ಸ್ಥಳಗಳಿಗೆ ಬೇಗ ತಲುಪಬಹುದಾಗಿದೆ. ಮೆಟ್ರೊ ಪ್ರಯಾಣ ದರವನ್ನು ಇನ್ನಷ್ಟು ಕಡಿಮೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ
–ಶ್ರೀನಿವಾಸ್ ಉಪನ್ಯಾಸಕ, ಬಸವೇಶ್ವರನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.