ADVERTISEMENT

ಪ್ರಾಚೀನ ಪಂಚಾಂಗದ ಲೆಕ್ಕಾಚಾರ ಸರಿ

ಕರ್ನಾಟಕ ವಿ.ವಿಯ ಪ್ರೊ.ಶ್ರೀನಿವಾಸ ಪಡಿಗಾರ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:44 IST
Last Updated 10 ಡಿಸೆಂಬರ್ 2013, 19:44 IST

ಬೆಂಗಳೂರು: ‘ನಾಸಾದ ಗ್ರಹಣ ಕೋಷ್ಠಕಕ್ಕೆ ಹೋಲಿಕೆ ಮಾಡಿದರೆ ನಮ್ಮ ದೇಶದ ಪ್ರಾಚೀನ ಪಂಚಾಂಗ ದಲ್ಲಿ ಖಗೋಳ ಗ್ರಹಣಗಳ ಬಗ್ಗೆ ನೀಡಿ ರುವ ಮಾಹಿತಿ ಮತ್ತು ಲೆಕ್ಕಾಚಾರ ಶೇಕಡ 75ರಷ್ಟು ಸರಿಯಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀನಿವಾಸ ಪಡಿಗಾರ್‌ ತಿಳಿಸಿದರು.  

ಭಾರತೀಯ ಇತಿಹಾಸ ಅನು ಸಂಧಾನ ಪರಿಷತ್ತಿನ (ಐ.ಸಿ.ಎಚ್‌. ಆರ್‌) ದಕ್ಷಿಣ ಪ್ರಾದೇಶಿಕ ಕೇಂದ್ರ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖ ಇರುವ ಗ್ರಹಣಗಳ ಸಂಪೂರ್ಣ ಮಾಹಿತಿಯನ್ನು ನಾಸಾ ತನ್ನ ಗ್ರಹಣ ಕೋಷ್ಠಕದ ಜತೆ ಹೋಲಿಕೆ ಮಾಡಿದ್ದು, ಅವೆರಡಲ್ಲಿ ಶೇಕಡ 75ರಷ್ಟು ಹೋಲಿಕೆಯಿದೆೆ’ ಎಂದು ವಿವರಿಸಿದರು.

‘ಪ್ರೊ.ಸ್ವಾಮಿನಾಥನ್‌ ಪಿಳೈ ಅವರು 7ನೇ ಶತಮಾನದಿಂದ 18ನೇ ಶತಮಾನದ ವರೆಗಿನ ಕ್ಯಾಲೆಂಡರನ್ನು ತಯಾರಿಸಿದ್ದು, ಅದರಲ್ಲಿ ಪ್ರಾಚೀನ ಕಾಲದ ಪಂಚಾಂಗದಲ್ಲಿ ಬಳಸುತ್ತಿದ್ದ ವಿಧಾನವನ್ನೇ ಬಳಸಲಾಗಿದೆ. ಹೀಗಾ ಗಿಯೇ ಶಾಸನಗಳಲ್ಲಿ ಗ್ರಹಣ ಗಳ ಬಗ್ಗೆ ಇರುವ ಉಲ್ಲೇಖಗಳನ್ನು ಈ ಕ್ಯಾಲೆಂಡರನ್ನು ಬಳಸಿಯೇ ಲೆಕ್ಕ ಹಾಕಲಾಗುತ್ತದೆ’ ಎಂದರು.

‘ಗ್ರಹಣಗಳು ಸಂಭವಿಸುವುದು ನೈಸ ರ್ಗಿಕ ಕ್ರಿಯೆ. ಗ್ರಹಣದ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಗಳ ಬಗ್ಗೆ ಯಾವ ಶಾಸನಗಳಲ್ಲೂ ಉಲ್ಲೇಖ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಪುದುಚೆರಿಯ ಫ್ರೆಂಚ್‌ ಇನ್ಸ್‌ಸ್ಟಿಟ್ಯೂಟ್‌ ನ ಪ್ರೊ.ವೈ. ಸುಬ್ಬರಾಯಲು ಅವರು ವಿಜ್ಞಾನ ಇತಿಹಾಸ ತಜ್ಞ ಪ್ರೊ.ಬಿ.ವಿ.ಸುಬ್ಬರಾ ಯಪ್ಪ ಅವರ ‘ಭಾರತೀಯ ಪ್ರಾಚೀನ ಶಾಸನಗಳಲ್ಲಿ ಸಂಖ್ಯೆಗಳು ಹಾಗೂ ಖಗೋಳ ಗ್ರಹಣಗಳ ಉಲ್ಲೇಖಗಳು’ ಎಂಬ ಪುಸ್ತಕ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಸುನಾಮಿ ಸಂಭವಿಸಿದ ನಂತರ ವಿಜ್ಞಾನಿಗಳು ಈ ಹಿಂದೆ ಸಂಭವಿಸಿರುವ ಗ್ರಹಣಗಳು, ಆ ಸಮಯದಲ್ಲಿ ನಡೆ ದಿರಬಹುದಾದ ಘಟನೆಗಳು ಹಾಗೂ ಆ ಘಟನೆಗಳು ನಡೆಯುವ ಮುನ್ನ ಸಿಕ್ಕಿರಬಹುದಾದ ಸೂಚನೆಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ’ ಎಂದರು.

‘ಪ್ರೊ. ಸುಬ್ಬರಾಯಪ್ಪ ಹಲವಾರು ಪ್ರಾಚೀನ ಶಾಸನಗಳನ್ನು ಅಧ್ಯಯನ ಮಾಡಿದ್ದು, ಅದರಲ್ಲಿನ ಉಲ್ಲೇಖ ಗಳು ಮತ್ತು ದಾಖಲೆಗಳನ್ನು ತೆಗೆದು ಕೊಂಡು ಈ ಪುಸ್ತಕವನ್ನು ಬರೆದಿ ದ್ದಾರೆ. ಇದು ಕೇವಲ ಇತಿಹಾಸ ತಜ್ಞ ರಲ್ಲದೆ ಸಾಮಾಜಿಕ ವಿಜ್ಞಾನಿಗಳಿಗೂ ಬಳಕೆಯಾಗಲಿದೆ. ಈ ಪುಸ್ತಕ ಕುರಿ ತಂತೆ ಮತ್ತಷ್ಟು ಸಂಶೋಧನೆ ನಡಯ ಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.