ADVERTISEMENT

ಪ್ರಾಣಿ ಪ್ರೀತಿ ಕಲಿಸಿದ್ದು ಜೈನ ಧರ್ಮ: ಗುಬ್ಬಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:56 IST
Last Updated 18 ಜೂನ್ 2017, 19:56 IST
ಸಂಜಯ್‌ ಗುಬ್ಬಿ ಮತ್ತು ಪತ್ನಿ ಡಾ. ಸುಮಾ ಅವರನ್ನು ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಾದ ಮಾಡಿದರು. ಬಿ.ಎಸ್‌. ದಿವಾಕರ್‌, ಸಂಜೀವ್‌ ಕುಮಾರ್‌ ಜಂಬೂ ಮಹಾಜನ್‌ ಇದ್ದರು
ಸಂಜಯ್‌ ಗುಬ್ಬಿ ಮತ್ತು ಪತ್ನಿ ಡಾ. ಸುಮಾ ಅವರನ್ನು ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಾದ ಮಾಡಿದರು. ಬಿ.ಎಸ್‌. ದಿವಾಕರ್‌, ಸಂಜೀವ್‌ ಕುಮಾರ್‌ ಜಂಬೂ ಮಹಾಜನ್‌ ಇದ್ದರು   

ಬೆಂಗಳೂರು: ನಮ್ಮ ಧರ್ಮದಲ್ಲಿರುವ ಆಚಾರ–ವಿಚಾರವೇ ನನ್ನನ್ನು ವನ್ಯಜೀವಿ ಲೋಕಕ್ಕೆ ಕರೆದುಕೊಂಡು ಬಂದಿದೆ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದರು.

ಶೀತಲನಾಥ ಎಜುಕೇಷನಲ್‌ ಆ್ಯಂಡ್‌ ಚಾರಿಟಬಲ್‌ ಟ್ರಸ್ಟ್‌ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 21ನೇ ವಾರ್ಷಿಕ ಪೂಜಾಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪ್ರಾಣಿಗಳನ್ನೂ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದ್ದು ಜೈನ ಧರ್ಮ ಮಾತ್ರ. ಅಲ್ಲದೆ, 24 ತೀರ್ಥಂಕರರಲ್ಲಿ 20 ತೀರ್ಥಂಕರರು ತಮ್ಮ ಲಾಂಛನದಲ್ಲಿ ಪ್ರಾಣಿ ಸಂಕೇತವನ್ನು ಹೊಂದಿದ್ದಾರೆ’ ಎಂದರು.

ADVERTISEMENT

‘ಗೋವಾದಲ್ಲಿ ಮಾತ್ರ ವನ್ಯಜೀವಿ ಉದ್ಯಾನಕ್ಕೆ ಮಹಾವೀರರ ಹೆಸರು ಇಡಲಾಗಿದೆ. ನಮ್ಮ ರಾಜ್ಯದಲ್ಲೂ ಉದ್ಯಾನವೊಂದಕ್ಕೆ ಜೈನ ತೀರ್ಥಂಕರರ ಹೆಸರು ಇಡಲು ನಾವು ಒಕ್ಕೊರಲಿನಿಂದ ಒತ್ತಾಯಿಸಬೇಕು’ ಎಂದು ತಿಳಿಸಿದರು.

ಜೈನ ಸಮುದಾಯದ ವಿಜ್ಞಾನಿ ಬಿ.ಎಸ್‌. ದಿವಾಕರ್‌ ಹಾಗೂ ಸಿಐಡಿ ಇನ್‌ಸ್ಪೆಕ್ಟರ್‌ ಸಂಜೀವ್‌ ಕುಮಾರ್‌ ಜಂಬೂ ಮಹಾಜನ್‌ ಅವರಿಗೆ ಸನ್ಮಾನಿಸಲಾಯಿತು. ಜೀವೇಂದ್ರ ಕುಮಾರ್‌ ಹೊತುಪೇಟೆ ಭಾಷಾಂತರಿಸಿದ ‘ಆರ್ಜವ ವಾಣಿ’ ಪುಸ್ತಕ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.