ADVERTISEMENT

`ಫುಲ್‌ಬ್ರೈಟ್'ಗೆ ಅನುಪಮಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:49 IST
Last Updated 14 ಜೂನ್ 2013, 19:49 IST

ಬೆಂಗಳೂರು: ನಗರದ ದಿಲ್ಲಿ ಪಬ್ಲಿಕ್ ಸ್ಕೂಲ್ (ಬೆಂಗಳೂರು ಪೂರ್ವ) ನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಅನುಪಮಾ ರಾಮಚಂದ್ರ ಅವರು `ಫುಲ್‌ಬ್ರೈಟ್ ಕಾರ್ಯಕ್ರಮ 2013-14'ಕ್ಕೆ ಆಯ್ಕೆಯಾಗಿದ್ದಾರೆ.

ಜಗತ್ತಿನ ಪ್ರಸಿದ್ಧ ಅಂತರರಾಷ್ಟ್ರೀಯ ವಿನಿಮಯ ಕಾರ್ಯಕ್ರಮ `ಫುಲ್‌ಬ್ರೈಟ್ ಶಿಕ್ಷಕರ ವಿನಿಮಯ ಕಾರ್ಯಕ್ರಮ (ಎಫ್‌ಸಿಟಿಇ)'ದಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮದ ಭಾಗವಾಗಿ ಅವರು ಕ್ಯಾಲಿಫೋರ್ನಿ ಯಾದ ರಿಚ್ಮಂಡ್ ಮಂಜಾನಿತಾ ಚಾರ್ಟರ್ ಪಬ್ಲಿಕ್ ಸ್ಕೂಲ್‌ನಲ್ಲಿ 2013ರ ಸೆಮಿಸ್ಟರ್‌ನಲ್ಲಿ ಇಂಗ್ಲಿಷ್ ಭಾಷೆ ಪಾಠ ಮಾಡಲಿದ್ದಾರೆ. ಫುಲ್‌ಬ್ರೈಟ್ ಕಾರ್ಯಕ್ರಮ ಜಗತ್ತಿನ ದೊಡ್ಡ ಶೈಕ್ಷಣಿಕ ವಿದ್ಯಾರ್ಥಿ ವೇತನದ ಕಾರ್ಯಕ್ರಮವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.