ADVERTISEMENT

ಬನ್ನೇರುಘಟ್ಟಕ್ಕೆ ಕಾಡೆಮ್ಮೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2012, 19:30 IST
Last Updated 28 ಫೆಬ್ರುವರಿ 2012, 19:30 IST
ಬನ್ನೇರುಘಟ್ಟಕ್ಕೆ ಕಾಡೆಮ್ಮೆ ಸೇರ್ಪಡೆ
ಬನ್ನೇರುಘಟ್ಟಕ್ಕೆ ಕಾಡೆಮ್ಮೆ ಸೇರ್ಪಡೆ   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಸ್ಯಾಹಾರಿ ಪ್ರಾಣಿಧಾಮಕ್ಕೆ ಮೈಸೂರು ಮೃಗಾಲಯದಿಂದ ಮೂರು ಕಾಡೆಮ್ಮೆಗಳನ್ನು ಕರೆತರಲಾಗಿದೆ. ಇದರಿಂದಾಗಿ ಇಲ್ಲಿನ ಕಾಡೆಮ್ಮೆಗಳ ಕುಟುಂಬದ ಸಂಖ್ಯೆ ಎಂಟಕ್ಕೇರಿದೆ.

ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಐದು ಕಾಡು ಕೋಣಗಳಿದ್ದು, ಸಂಗಾತಿ ಇಲ್ಲದೇ ಒಂಟಿಯಾಗಿದ್ದವು. ಕಾಡೆಮ್ಮೆ ಸಂತತಿ ಅಭಿವೃದ್ಧಿಗೆ ಇದರಿಂದ ಅಡಚಣೆಯಾಗಿತ್ತು.

ಬನ್ನೇರುಘಟ್ಟ ಜೈವಿಕ ಉದ್ಯಾನದ ಮನವಿ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ಮೇರೆಗೆ ಮೈಸೂರು ಮೃಗಾಲಯದಿಂದ ಈ ಮೂರು ಕಾಡೆಮ್ಮೆಗಳನ್ನು ಬನ್ನೇರುಘಟ್ಟ ಉದ್ಯಾನಕ್ಕೆ ತರಲಾಗಿದೆ.  
ನೂತನ ಅತಿಥಿಗಳನ್ನು ಉದ್ಯಾನದ ಪ್ರತ್ಯೇಕ ಆವರಣದಲ್ಲಿಡಲಾಗಿದೆ. ಒಂದು ವಾರ ಕಾಲ ನಿಗಾ ವಹಿಸಿದ ನಂತರ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುವುದು ಎಂದು ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.