ಬೆಂಗಳೂರು: ಬಾರ್ ಮತ್ತು ರೆಸ್ಟೋರೆಂಟ್‌ಗಳ ವಾರಾಂತ್ಯದ (ಶುಕ್ರವಾರ ಮತ್ತು ಶನಿವಾರ) ವಹಿವಾಟಿನ ಅವಧಿಯನ್ನು ವಿಸ್ತರಣೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಶುಕ್ರವಾರ ರಾತ್ರಿಯಿಂದಲೇ ಜಾರಿಯಾಗಿದ್ದು, ಮೊದಲ ದಿನವೇ ನಗರದ ಹಲವೆಡೆ ರಾತ್ರಿ 1 ಗಂಟೆವರೆಗೂ ಬಾರ್‌ಗಳು ವಹಿವಾಟು ನಡೆಸಿದವು.
ಗ್ರಾಹಕರು ಯಾವುದೇ ಅವಸರವಿಲ್ಲದೆ ತಡರಾತ್ರಿವರೆಗೆ ಬಾರ್ಗಳಲ್ಲಿ ಕುಳಿತು ಮದಿರೆಯ ಮಜಾ ಅನುಭವಿಸಿದರು. ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಹೋಟೆಲ್‌ಗಳಿಗೆ ಬಂದಿದ್ದ ಗ್ರಾಹಕರು ಆಹಾರ ಪದಾರ್ಥಗಳನ್ನು ಸವಿದರು.
ವಹಿವಾಟಿನ ಅವಧಿ ವಿಸ್ತರಣೆಗೆ ಅನುಗುಣವಾಗಿ ನಗರದೆಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಪೊಲೀಸರು ಆಗಾಗ್ಗೆ ಬಾರ್ ಮತ್ತು ಹೋಟೆಲ್‌ಗಳ ಬಳಿ ಬಂದು ಪರಿಶೀಲಿಸುತ್ತಿದ್ದ ದೃಶ್ಯ ಕಂಡುಬಂತು.
ಒತ್ತಡವಿಲ್ಲ: ‘ಪ್ರತಿನಿತ್ಯ ರಾತ್ರಿ ಹತ್ತು ಗಂಟೆಗೆ ಕಚೇರಿ ಕೆಲಸ ಮುಗಿಯುತ್ತದೆ. ಆ ನಂತರ ಬಾರ್‌ಗೆ ಬಂದು ಸ್ನೇಹಿತರೊಂದಿಗೆ ಕುಳಿತು ಮದ್ಯ ಕುಡಿಯಲು ಹೆಚ್ಚಿನ ಕಾಲಾವಕಾಶ ಇರುತ್ತಿರಲಿಲ್ಲ. ಈಗ ಬಾರ್‌ಗಳ ವಹಿವಾಟಿನ ಅವಧಿ ವಿಸ್ತರಣೆಯಾಗಿರುವುದರಿಂದ ಸಮಯದ ಒತ್ತಡವಿಲ್ಲ’ ಎಂದು ಬ್ರಿಗೇಡ್ ರಸ್ತೆಯ ಬಾರ್‌ವೊಂದರಲ್ಲಿದ್ದ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ಕರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲಸಗಾರರ ಸಮಸ್ಯೆ: ‘ರಾತ್ರಿ ಒಂದು ಗಂಟೆವರೆಗೆ ವಹಿವಾಟು ನಡೆಸಲು ಕೆಲಸಗಾರರು ಸಿಗುತ್ತಿಲ್ಲ. ಮತ್ತೊಂದೆಡೆ ರಾತ್ರಿ 1ರ ನಂತರ ಕೆಲಸಗಾರರನ್ನು ಮನೆಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡುವುದು ಕಷ್ಟ. ಆದ್ದರಿಂದ ಹಿಂದಿನಂತೆಯೇ ಬೇಗನೆ ವಹಿವಾಟು ಮುಗಿಸುತ್ತಿದ್ದೇವೆ’ ಎಂದು ಮಹಾಲಕ್ಷ್ಮಿಲೇಔಟ್‌ನ ವಿದ್ಯಾ ಬಾರ್‌ನ ಮಾಲೀಕ ಬೈಯಣ್ಣ ತಿಳಿಸಿದರು.
ಬಸ್ ವ್ಯವಸ್ಥೆ ಮಾಡಲಿ: ‘ಹೊಸ ಆದೇಶ ಜಾರಿಯಾಗಿ ಕೇವಲ ನಾಲ್ಕು ದಿನವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿಲ್ಲ. ದಿನ ಕಳೆದಂತೆ ಗ್ರಾಹಕರು ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.
‘ವಹಿವಾಟಿನ ಅವಧಿ ವಿಸ್ತರಣೆಗೆ ಅನುಗುಣವಾಗಿ ಬಿಎಂಟಿಸಿ ಬಸ್ ಸೇವೆಯ ವ್ಯವಸ್ಥೆ ಮಾಡಬೇಕು. ಆಗ ಗ್ರಾಹಕರಿಗೂ ಅನುಕೂಲವಾಗುತ್ತದೆ’ ಎಂದು ಚಂದ್ರಶೇಖರ ಅವರು ತಿಳಿಸಿದ್ದಾರೆ.
ಕೋರ್ಟ್ ತಿರಸ್ಕಾರ
ಹಣ ಮರುಪಾವತಿಸಲು ಆಗುವುದಿಲ್ಲ ಎಂದು ಈಗ ಹೇಳುತ್ತಿದೆ. ಇದು ನಮಗೆ (ಕೋರ್ಟಿಗೆ) ಮಾಡಿದ ಅವಮಾನ’ ಎಂದು ಪೀಠ ಹೇಳಿದೆ.
ಮೂರು ದಿನದ ಒಳಗಡೆ ₨ 2,500 ಕೋಟಿ ನಗದು ಹಣವನ್ನು ಪಾವತಿ ಮಾಡಲಾಗುವುದು. ಉಳಿದ ಮೊತ್ತವಾದ ₨ 14,900 ಕೋಟಿಯನ್ನು 2015ರ ಜುಲೈ ಒಳಗೆ ಐದು ಕಂತುಗಳಲ್ಲಿ ‘ಸೆಬಿ’ಗೆ ಹಿಂತಿರುಗಿಸಲಾಗುವುದು ಎಂದು ಸಹಾರಾ ಸಮೂಹ ಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ ಸಂಸ್ಥೆಯ ಈ ಪ್ರಸ್ತಾವವನ್ನು ನ್ಯಾ. ರಾಧಾಕೃಷ್ಣನ್ ಹಾಗೂ ಜೆ.ಎಸ್. ಕೇಹರ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತ್ತು.
ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಸಹ ಈ ಪ್ರಸ್ತಾಪ ವಿರೋಧಿಸಿದೆ. ವಾಸ್ತವವಾಗಿ ಸಂಸ್ಥೆ ₨ 34,000 ಕೋಟಿ ನೀಡಬೇಕಿದ್ದು, ಆದರೆ ಅದೀಗ ಕೇವಲ ₨ 17,400 ಕೋಟಿ ನೀಡುವುದಾಗಿ ತಿಳಿಸಿದೆ ಎಂದು ‘ಸೆಬಿ ’ ತಿಳಿಸಿದೆ.
ಗಸ್ತು ಹೆಚ್ಚಿಸಲಾಗಿದೆ
ಅವಧಿ ವಿಸ್ತರಣೆಗೆ ಅನುಗುಣವಾಗಿ ನಗರದೆಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
–ರಾಘವೇಂದ್ರ ಔರಾದಕರ್ ನಗರ ಪೊಲೀಸ್ ಕಮಿಷನರ್
ತಡರಾತ್ರಿ ವರೆಗೂ ಬಿಎಂಟಿಸಿ ಬಸ್‌ಗೆ ಸಿದ್ಧತೆ
ಬೆಂಗಳೂರು: ನಗರದಲ್ಲಿ ತಡರಾತ್ರಿವರೆಗೂ ಹೋಟೆಲ್ ಹಾಗೂ ಬಾರ್‌ಗಳ ವಹಿವಾಟು ಆರಂಭವಾಗಿರುವ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೆಲವು ಮಾರ್ಗಗಳಲ್ಲಿ ಬಸ್ ಸೌಲಭ್ಯ ಕಲ್ಪಿಸಲು ಸಿದ್ಧತೆ ನಡೆಸಿದೆ. ಆದರೆ, ಸರ್ಕಾರದ ಅಧಿಸೂಚನೆಯ ಪ್ರತಿ ಸಿಗುವ ವರೆಗೆ ಕಾಯಲು ಸಂಸ್ಥೆ ತೀರ್ಮಾನಿಸಿದೆ.
‘ಪ್ರತಿದಿನ ಸುಮಾರು 45 ಲಕ್ಷ ಮಂದಿ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಪ್ರಯಾಣಿಕರಿಗೆ ತಡ ರಾತ್ರಿ ವರೆಗೂ ಸೇವೆ ನೀಡಲು ಸಂಸ್ಥೆ ಸಿದ್ಧ ಇದೆ. ಸೇವೆ ಆರಂಭವಾದ ಬಳಿಕ ಪ್ರಯಾಣಿಕರ ಪ್ರತಿಕ್ರಿಯೆಯನ್ನೂ ಗಮನಿಸಬೇಕಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.ಇನ್ನೊಂದೆಡೆ, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಸಹ ತಡ ರಾತ್ರಿ ವರೆಗೆ ಸೇವೆ ಒದಗಿಸಲು ಸಿದ್ಧ ಎಂದಿದ್ದಾರೆ.
ಆದರ್ಶ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ತಡ ರಾತ್ರಿ ವರೆಗೆ ವಹಿವಾಟಿಗೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ, ಬಾರ್‌ಗಳಿಗೆ ಹಾಗೂ ಹೋಟೆಲ್‌ಗಳಿಗೆ ಸೀಮಿತ ಮಾಡಿರುವುದು ಸರಿಯಲ್ಲ. ಸಣ್ಣ ಅಂಗಡಿಗಳು ಹಾಗೂ ಮೆಡಿಕಲ್ ಶಾಪ್ ಸೇರಿದಂತೆ ಪ್ರಮುಖ ಅಂಗಡಿಗಳು ಸಹ ತಡ ರಾತ್ರಿ ವರೆಗೆ ತೆರೆದಿರಬೇಕು’ ಎಂದರು.
‘ತಡರಾತ್ರಿ ವರೆಗೆ ವಹಿವಾಟು ವಿಸ್ತರಣೆಯಿಂದ ಟ್ಯಾಕ್ಸಿಗಳಿಗೆ ಹೆಚ್ಚಿನ ಲಾಭ ಉಂಟಾಗಲಿದೆ’ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.