ADVERTISEMENT

ಬಾಲಕ ಸಾವು ಕಿಮ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:31 IST
Last Updated 13 ಏಪ್ರಿಲ್ 2018, 19:31 IST

ಬೆಂಗಳೂರು: ‘ವೈದ್ಯರ ನಿರ್ಲಕ್ಷ್ಯದಿಂದಾಗಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ’ ಎಂದು ಆರೋಪಿಸಿ ಪೋಷಕರು ಕಿಮ್ಸ್ ಆಸ್ಪತ್ರೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕುಣಿಗಲ್ ತಾಲ್ಲೂಕಿನ ಅಕ್ಕಿಮರಿ ಪಾಳ್ಯದ ಚಿಕ್ಕೇಗೌಡ ಅವರ ಮಗ ಅಕುಲ್‌ಗೌಡನನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಮಗುವಿನ ಮೂಗಿನಲ್ಲಿ ದುರ್ಮಾಂಸ ಬೆಳೆದಿತ್ತು. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಆಸ್ಪತ್ರೆಯ ವೈದ್ಯರು 15 ದಿನಗಳ ಹಿಂದೆಯೇ ಸೂಚಿಸಿದ್ದರು. ಅಕುಲ್‌ಗೆ ರಜೆ ಇದ್ದ ಕಾರಣ ಶುಕ್ರವಾರ ಆಸ್ಪತ್ರೆಗೆ ದಾಖಲಿಸಿದ್ದೆವು. ಬೆಳಿಗ್ಗೆ 10.30ಕ್ಕೆ ಶಸ್ತ್ರಚಿಕಿತ್ಸೆ ಆರಂಭವಾಯಿತು. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದಷ್ಟೇ ವೈದ್ಯರು ಹೇಳಿದರು. ಆದರೆ ಮಧ್ಯಾಹ್ನ 3.30ಕ್ಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಅರಿವಳಿಕೆ ಮದ್ದು ಹೆಚ್ಚಾಗಿದ್ದರಿಂದ ಅಕುಲ್‌ ಮೃತಪಟ್ಟಿದ್ದಾನೆ’ ಎಂದು ಚಿಕ್ಕೇಗೌಡ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.