ADVERTISEMENT

ಬೀಗಮುದ್ರೆ ತೆರವಿಗೆ ಟೊಯೊಟಾ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:37 IST
Last Updated 20 ಮಾರ್ಚ್ 2014, 19:37 IST

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಂಪೆನಿಯ ನೌಕರರು ಪ್ರತಿಭಟನೆ ನಡೆಸಿದ ಕಾರಣಕ್ಕೆ ಮಾ.16ರಂದು ಬೀಗಮುದ್ರೆ (ಲಾಕ್‌ಔಟ್‌ೆ) ಘೋಷಿಸಿದ್ದ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಲಿಮಿಟೆಡ್‌ ಮಾ.24ರಿಂದ ಬೀಗಮುದ್ರೆ ತೆರವಿಗೆ ಸಮ್ಮತಿಸಿದೆ.

ಗುರುವಾರ ನಡೆದ ಆಡಳಿತ ಮಂಡಳಿ,  ಕಾರ್ಮಿಕ ಇಲಾಖೆ ಹಾಗೂ ನೌಕರರ ಒಕ್ಕೂಟದ ಮುಖಂಡರ ಸಭೆಯಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕಂಪೆನಿ ಒಪ್ಪಿಕೊಂಡಿದೆ. ಕೆಲವು ಷರತ್ತುಗಳೊಂದಿಗೆ ಬೇಡಿಕೆಗಳ ಈಡೇರಿಕೆಗೆ ಕಂಪೆನಿ ಒಪ್ಪಿಗೆ ನೀಡಿದೆ ಎಂದು ಟೊಯೊಟಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್‌.ಸತೀಶ್‌ ತಿಳಿಸಿದ್ದಾರೆ.

₨ 4 ಸಾವಿರ ವೇತನ ಹೆಚ್ಚಳ ಮಾಡ­ಬೇಕೆಂದು ನೌಕರರ ಒಕ್ಕೂಟ ಬೇಡಿಕೆ ಇಟ್ಟಿತ್ತು. ಆದರೆ, ₨ 3,050 ವೇತನ ಹೆಚ್ಚಳಕ್ಕೆ ಕಂಪೆನಿಯ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಆಡಳಿತ ಮಂಡಳಿಯ ಈ ತೀರ್ಮಾನದ ವಿರುದ್ಧ ಕಂಪೆನಿಯ ನೌಕರರು ಪ್ರತಿಭಟನೆಗೆ ಮುಂದಾ­ಗಿದ್ದರು. 4,000 ಕಾಯಂ ನೌಕರರು ಸೇರಿದಂತೆ ಒಟ್ಟು 6,100 ನೌಕರರು ಕಂಪೆನಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.