ADVERTISEMENT

‘ಬೆಂಗಳೂರಿಗೂ ಬೇಕು ಉತ್ತಮ ರಸ್ತೆಗಳು’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST

ಬೆಂಗಳೂರು: ದಯಾನಂದ ಸಾಗರ್ ಕಾಲೇಜು ಸಹಯೋಗದಲ್ಲಿ ಸಿಟಿಜನ್ಸ್ ಫಾರ್ ಬೆಂಗಳೂರು (ಸಿಎಫ್‌ಬಿ) ‘ಬೆಂಗಳೂರಿಗೂ ಬೇಕು ಉತ್ತಮ ರಸ್ತೆಗಳು’ ಅಭಿಯಾನಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಿದೆ.

ವಾಸ್ತುಶಿಲ್ಪ ಹಾಗೂ ನಗರ ಯೋಜನಾ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾತ್ರ ಅಭಿಯಾನದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.

ನಗರಕ್ಕೆ ಯಾವ ಮಾದರಿಯ ರಸ್ತೆಗಳನ್ನು ನಿರ್ಮಾಣ ಮಾಡಿದರೆ ಉತ್ತಮ ಎಂಬ ಸಲಹೆಗಳನ್ನು ವಿದ್ಯಾರ್ಥಿಗಳು ನೀಡಬಹುದು. ಅತ್ಯುತ್ತಮ ಸಲಹೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ. 50 ತಂಡಗಳಲ್ಲಿ 200 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ADVERTISEMENT

ವಾಸ್ತುಶಿಲ್ಪ ವಿಭಾಗದ ಡೀನ್ ರಮಾ ಆರ್. ಸುಬ್ರಮಣಿಯನ್, ‘ಸಂಚಾರ ಹಾಗೂ ಸ್ಥಳೀಯ ಆಡಳಿತವು ನಗರದ ಖ್ಯಾತಿಯನ್ನು ಕುಂದಿಸಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಯುವ ಸಮೂಹ ಮುಂದಾಗಬೇಕಿದೆ. ಅಭಿಯಾನದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ನಗರ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದರು.

ನಗರ ಯೋಜನಾ ತಜ್ಞ ವಿ.ರವಿಚಂದರ್, ‘ಮಹಾಯೋಜನೆ ರೂಪುಗೊಳ್ಳುವ ಮುನ್ನ ನಗರದಲ್ಲಿ ಶೇ 35 ರಷ್ಟು ಬಯಲು ಪ್ರದೇಶವಿತ್ತು. ಆದರೆ, ಪರಿಷ್ಕೃತ ಕರಡು ಮಹಾಯೋಜನೆ 2031 ಪ್ರಕಾರ ಅದು ಶೇ 4 ರಷ್ಟಕ್ಕೆ ಇಳಿಯಲಿದೆ’ ಎಂದರು.

ಹೆಸರು ನೋಂದಾಯಿಸಿಕೊಳ್ಳಲು: registerforbetterstreets@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.