ADVERTISEMENT

ಬೆಂಗಳೂರು ಒನ್ ಸೆಂಟರ್‌ನಲ್ಲಿ ಬಸ್ ಟಿಕೆಟ್: ಕೆಎಸ್‌ಆರ್‌ಟಿಸಿ ಹೊಸ ಯೋಜ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 20:00 IST
Last Updated 23 ಫೆಬ್ರುವರಿ 2011, 20:00 IST

ಬೆಂಗಳೂರು: ‘ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ, ಬಸ್ ಟಿಕೆಟ್‌ಗಳನ್ನು ಬೆಂಗಳೂರು ಒನ್ ಸೆಂಟರ್ ಮೂಲಕ ವಿತರಿಸುವ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದೆ’ ಎಂದು ಸಾರಿಗೆ ಸಚಿವ ಆರ್.ಅಶೋಕ ನುಡಿದರು.

 ಮಲ್ಲೇಶ್ವರದ ಬೆಂಗಳೂರು ಒನ್ ಕೇಂದ್ರದಲ್ಲಿ ನೂತನವಾಗಿ ಕಾರ್ಯಾರಂಭ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪಡೆಯುವ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನೂತನ ವ್ಯವಸ್ಥೆ ಸಮರ್ಥವಾಗಿ ಕೆಲಸ ನಿರ್ವಹಿಸಲು ಅಗತ್ಯವಿರುವ ಉಪಕರಣಗಳನ್ನು ಅಳವಡಿಸಲಾಗುವುದು. ಹಲವಾರು ನಾಗರಿಕ ಸೇವೆಗಳನ್ನು ಒದಗಿಸುತ್ತಿರುವ ಬೆಂಗಳೂರು ಒನ್ ಕೇಂದ್ರಕ್ಕೆ ಇದೊಂದು ಹೊಸ ಸೇರ್ಪಡೆ’ ಎಂದು ಅವರು ತಿಳಿಸಿದರು.

ಫೆಬ್ರುವರಿ 28ಕ್ಕೆ ಈಗ ಸೇವೆಯಲ್ಲಿರುವ 65 ಬೆಂಗಳೂರು ಒನ್ ಕೇಂದ್ರಗಳನ್ನು 75ಕ್ಕೆ ಏರಿಸಲಾಗುವುದು. ಟಿಕೆಟ್‌ಗಳನ್ನು ಕರ್ನಾಟಕ ಒನ್ ಕೇಂದ್ರಗಳ ಮೂಲಕವು ಪಡೆಯುವ ವ್ಯವಸ್ಥೆ ಮಾಡಲಾಗಿದೆ. ವಾರದ ಎಲ್ಲ ದಿನವೂ ಈ ಕೇಂದ್ರಗಳು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕೆಲಸ ನಿರ್ವಹಿಸಲಿವೆ. ರಾಜ್ಯದ ವಿವಿಧೆಡೆ ಹಾಗೂ ಬೇರೆ ರಾಜ್ಯಗಳಿಗೆ ತೆರಳಲು ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದ್ದು, ಪ್ರಯಾಣ ರದ್ದಾದರೆ ಇದೇ ಕೇಂದ್ರಗಳಲ್ಲಿ ಟಿಕೆಟ್‌ಗಳನ್ನು ವಾಪಸ್ ನೀಡಿ ಹಣವನ್ನು ಪಡೆಯಬಹುದಾಗಿದೆ,

ಸಚಿವ ಎಸ್.ಸುರೇಶ್‌ಕುಮಾರ್, ಇ ಆಡಳಿಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.