ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಗ್ರಾಮ ಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 18:50 IST
Last Updated 21 ಆಗಸ್ಟ್ 2012, 18:50 IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ಪಂಚಾಯಿತಿ ಕ್ಷೇತ್ರಗಳಲ್ಲಿ ಖಾಲಿಯಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ಆರೂಡಿ ಗ್ರಾಮ ಪಂಚಾಯ್ತಿಯ ಆರೂಡಿ ಕ್ಷೇತ್ರ 1 (ಪ.ಜಾ. ಮಹಿಳೆ), ನೆಲಮಂಗಲ ತಾಲ್ಲೂಕು ಯಂಟಗಾನಹಳ್ಳಿ ಗ್ರಾಮಪಂಚಾಯ್ತಿ ಹೊನ್ನಸಂದ್ರ ಕ್ಷೇತ್ರ 1 (ಪ.ಜಾ),  ಶ್ರಿನಿವಾಸಪುರ ಗ್ರಾಮ ಪಂಚಾಯ್ತಿಯ ಮೊದಲಕೋಟೆ ಕ್ಷೇತ್ರ 1 (ಸಾಮಾನ್ಯ), ವಿಶ್ವೇಶ್ವರಪುರ ಗ್ರಾಮಪಂಚಾಯ್ತಿಯ ಹುರಳಹಳ್ಳಿ ಕ್ಷೇತ್ರ 1 (ಪ.ಜಾ.ಮಹಿಳೆ), ಹೊಸಕೋಟೆ ತಾಲ್ಲೂಕಿನ ಇಟ್ಟಸಂದ್ರ ಗ್ರಾಮಪಂಚಾಯ್ತಿಯ ಹಿಂಡಿಗನಾಳ ಕ್ಷೇತ್ರ 1 (ಸಾಮಾನ್ಯ), ನಲವಾಗಿಲು ಗ್ರಾಮಪಂಚಾಯ್ತಿಯ ತರಬಹಳ್ಳಿ ಕ್ಷೇತ್ರ 1 (ಪ.ಜಾ), ಲಕ್ಕೊಂಡಹಳ್ಳಿ ಗ್ರಾಮಪಂಚಾಯ್ತಿಯ ಲಕ್ಕೊಂಡಹಳ್ಳಿ ಕ್ಷೇತ್ರ 1 (ಸಾಮಾನ್ಯ) ಸೇರಿದಂತೆ ಖಾಲಿಯಿರುವ ಒಟ್ಟು 7 ಸದಸ್ಯ ಸ್ಥಾನಗಳಿಗೆ ಮತ್ತು ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾ.ಪಂ.ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ:  ಚುನಾವಣೆಗೆ ಇದೇ 28ರೊಳಗೆ ನಾಮಪತ್ರಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಇದೇ 29 ನಾಮಪತ್ರಗಳ ಪರಿಶೀಲನೆಗೆ ಕೊನೆಯ ದಿನ. ನಾಮಪತ್ರ ಹಿಂತೆಗೆದುಕೊಳ್ಳಲು 31ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್ 12ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.