ಯಲಹಂಕ: ಶಿಕ್ಷಣ ಸಂಸ್ಥೆಗಳು ಬೌದ್ಧಿಕ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖಪಾತ್ರ ವಹಿಸಬೇಕು ಎಂದು ಭಾರತೀಯ ಸಾಮಾಜಿಕವಿಜ್ಞಾನ ಸಂಶೋಧನಾ ಪರಿಷತ್ತಿನ(ನವದೆಹಲಿ) ಮಾಜಿ ಅಧ್ಯಕ್ಷ ಡಾ.ವಿ.ಆರ್.ಪಂಚಮುಖಿ ಹೇಳಿದರು.
ಶೇಷಾದ್ರಿಪುರ ಪ್ರಥಮದರ್ಜೆ ಕಾಲೇ ಜಿನಲ್ಲಿ ನಡೆದ ‘ಜಾಗತಿಕ ಪರಿವರ್ತನೆಗಳು’ ಕುರಿತ ಅಂತರ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಮೌಲ್ಯಾಧಾರಿತ ಶಿಕ್ಷಣ ಇಂದಿನ ಅವಶ್ಯಕತೆಯಾಗಿದ್ದು, ಶಿಕ್ಷಣ ಸಂಸ್ಥೆಗಳು ಜ್ಞಾನಮುಖಿಯಾಗಬೇಕು ಎಂದರು.
ಅಂತರರಾಷ್ಟ್ರೀಯ ಉತ್ಪಾದನಾ ವಿಜ್ಞಾನಸಂಸ್ಥೆಯ(ಯು.ಕೆ) ಅಧ್ಯಕ್ಷ ಡಾ.ಜಾನ್‌ಹೀಪ್ ಮಾತನಾಡಿ, ಮಕ್ಕಳ ನ್ನು ಅಧ್ಯಯನಶೀಲರನ್ನಾಗಿ ಮಾಡಲು ಶ್ರಮವಹಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.