ADVERTISEMENT

ಭಾವಸಾರ ಕ್ಷತ್ರಿಯ ಸೇವಾ ಸಮಿತಿ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 20:09 IST
Last Updated 17 ಜುಲೈ 2017, 20:09 IST
ಕಾರ್ಯಕ್ರಮವನ್ನು ಎಸ್. ಮುನಿರಾಜು ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ನರಸಿಂಗರಾವ್‌, ಪದಾಧಿಕಾರಿಗಳಾದ ಎಂ.ಶ್ರೀನಿವಾಸ್‌ ಕುಮಾರ್, ವೆಂಕಟೇಶ್‌ ರಾವ್‌ ಇದ್ದಾರೆ
ಕಾರ್ಯಕ್ರಮವನ್ನು ಎಸ್. ಮುನಿರಾಜು ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ನರಸಿಂಗರಾವ್‌, ಪದಾಧಿಕಾರಿಗಳಾದ ಎಂ.ಶ್ರೀನಿವಾಸ್‌ ಕುಮಾರ್, ವೆಂಕಟೇಶ್‌ ರಾವ್‌ ಇದ್ದಾರೆ   

ಬೆಂಗಳೂರು: ಅಖಿಲ ಭಾರತ ಭಾವಸಾರ ಕ್ಷತ್ರಿಯ ಸೇವಾ ಸಮಿತಿ ವತಿಯಿಂದ ಪೀಣ್ಯ ದಾಸರಹಳ್ಳಿಯ ರವೀಂದ್ರನಗರದಲ್ಲಿ  ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಶಾಸಕ ಎಸ್.ಮುನಿರಾಜು ಮಾತನಾಡಿ, ‘ಭಾವಸಾರ ಕ್ಷತ್ರಿಯ ಸಮಾಜದವರು ವೃತ್ತಿಯಲ್ಲಿ ದರ್ಜಿಗಳಾದರೂ ಇಂದು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದರು.

‘ನಾವೆಲ್ಲ ಹೊಸ ಬಟ್ಟೆಗಳನ್ನು ಹಾಕಿಕೊಂಡು ಸುಂದರವಾಗಿ ಕಾಣಲು ದರ್ಜಿಗಳು ಕಾರಣ’ ಎಂದು ಹೇಳಿದರು.

ADVERTISEMENT

ಸಮಿತಿಯ ಖಜಾಂಚಿ ವಿಠ್ಠಲರಾವ್, ‘ರಾಜ್ಯದಲ್ಲಿ ಸಮಿತಿಯ 450 ಶಾಖೆಗಳಿವೆ. ನಗರದಲ್ಲಿ 25 ಸಾವಿರ ಮಂದಿ ಭಾವಸಾರ ಕ್ಷಿತ್ರಿಯರಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಸಮಿತಿ ಶ್ರಮಿಸುತ್ತಿದೆ’ ಎಂದರು.

‘ನಮ್ಮ ಜನಾಂಗದವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈವರೆಗೆ ಸಮುದಾಯದ ಒಬ್ಬ ವ್ಯಕ್ತಿಯೂ ಐಎಎಸ್‌ ಅಥವಾ ಐಪಿಎಸ್ ಅಧಿಕಾರಿಯಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.