ಬೆಂಗಳೂರು: ಜನಾಗ್ರಹದ ಐ ಪೇಯ್ಡ ಬ್ರೈಬ್ ಡಾಟ್‌ಕಾಂ ನೇತೃತ್ವದಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನ ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶನಿವಾರ ನಡೆಯಿತು.
`ಕೇವಲ ಧರಣಿ ಮಾಡಬೇಡಿ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ~ ಎಂಬ ಘೋಷಣೆ ಮೂಲಕ ನಡೆದ ಅಭಿಯಾನದಲ್ಲಿ ನಗರದ ವಿವಿಧ ಕಾಲೇಜುಗಳ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ಹಚ್ಚಲು ತರಬೇತಿ ನೀಡಲಾಯಿತು. ನಗರದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಿಬಿಎಂಪಿಯ 198 ವಾರ್ಡ್ ಕಚೇರಿಗಳು, ನೋಂದಣಿ ಇಲಾಖೆ, ಬೆಸ್ಕಾಂ, ಜಲಮಂಡಲಿಯ ಸುಮಾರು 150 ಕಚೇರಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಭಿತ್ತಿಪತ್ರಗಳು ಅರಿತುಕೊಳ್ಳಲು ಸರಳವಾಗಿದ್ದು ಸಾರ್ವಜನಿಕರು ಸಂಪರ್ಕಿಸಲು ಎಸ್‌ಎಂಎಸ್ ಸಂಖ್ಯೆಯೊಂದನ್ನು ಅದರಲ್ಲಿ ಮುದ್ರಿಸಲಾಗಿದೆ. ಜನರು ಸರ್ಕಾರಿ ಅಧಿಕಾರಿಗಳೊಂದಿಗೆ ತಮ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಅನುಭವಗಳನ್ನು ಈ ಮೂಲಕ ಹಂಚಿಕೊಳ್ಳಬಹುದಾಗಿದೆ. `ಇಲ್ಲಿ ನನಗೆ ಲಂಚ ಕೇಳಲಾಗಿದೆ~ ಅಥವಾ `ನನಗೆ ಲಂಚ ಕೇಳಿಲ್ಲ~ ಎಂಬ ಎರಡು ಆಯ್ಕೆಗಳು ಇದ್ದು ಜನರು ತಮ್ಮ ಅನುಭವವನ್ನು 561 6151ಗೆ ಚ್ಟಿಜಿಚಿಛಿ ಮತ್ತು ಚ್ಟಿಜಿಚಿಛಿ ಎಂದು ಎಸ್‌ಎಂಎಸ್ ಮಾಡಬಹುದು.
ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಸುಮಿತ್ ಮಾತನಾಡಿ, `ಸಮಾಜದಲ್ಲಿ ಇಂದು ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಅಭಿಯಾನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು~ ಎಂದು ವಿನಂತಿಸಿದರು.
ಜನಾಗ್ರಹದ ಸಹಸ್ಥಾಪಕರಾದ ಸ್ವಾತಿ ರಾಮನಾಥನ್, ಜನಾಗ್ರಹದ ಆನ್‌ಲೈನ್ ಸಮನ್ವಯಕಾರ ಸುಬ್ರಹ್ಮಣ್ಯಂ ಇವಾಟುರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.