ADVERTISEMENT

ಮಕ್ಕಳ ಜತೆ ಹಾಡಿ, ಕುಣಿದ ಸಂಗೀತಜ್ಞ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ಬ್ರಿಟೀಷ್ ಕೌನ್ಸಿಲ್ ನಗರದ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಏಳು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಂಗ್ಲೆಂಡ್‌ನ ಖ್ಯಾತ ಸಂಗೀತ ತರಬೇತುದಾರ ರಿಚರ್ಡ್ ಫ್ರೊಸ್ಟಿಕ್ ಅವರು ಮಕ್ಕಳಿಗೆ ತರಬೇತಿ ನೀಡಿದರು. ವಿಶ್ವದ ಮಕ್ಕಳೆಲ್ಲ ಒಂದೇ ಎಂದು ಸಾರುವ `ಚೈಲ್ಡ್ ಆಫ್ ದ ಯೂನಿವರ್ಸ್~ ಸೇರಿದಂತೆ ಹಲವು ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.

ಮಕ್ಕಳು ಸಹ ಹೊಸ ಹೊಸ ಹಾಡುಗಳನ್ನು ಹೇಳಿ ಸಂಭ್ರಮಿಸಿದರು.
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಯೋಜಿಸಿರುವ ಸ್ಲಂಡಾಗ್ ಮಿಲೇನಿಯರ್ ಚಿತ್ರದ `ಜೈ ಹೋ~ ಗೀತೆಯನ್ನು ಮಕ್ಕಳು ಹಾಡಿದರು.

ಮಕ್ಕಳು `ಜೈ ಹೋ~ ಹಾಡನ್ನು ಹಾಡುತ್ತಿದ್ದಾಗ ಚಿತ್ರೀಕರಣ ಮಾಡಲಾಯಿತು. ರಿಚರ್ಡ್ ಅವರು ಆ ವಿಡಿಯೊ ತುಣುಕು ಬಳಸಿ ಮಕ್ಕಳನ್ನು ತರಬೇತುಗೊಳಿಸಲಿದ್ದಾರೆ. ಲಂಡನ್ ಒಲಂಪಿಕ್ಸ್‌ನಲ್ಲಿ `ಜೈ ಹೋ~ ಗೀತೆಯನ್ನು ಹಾಡಲಾಗುತ್ತದೆ.

ಆರ್ಮಿ ಪಬ್ಲಿಕ್ ಸ್ಕೂಲ್, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು ಇಂಟರ್‌ನ್ಯಾಷನಲ್ ಅಕಾಡೆಮಿ (ಜಯನಗರ), ಕ್ರೈಸ್ಟ್ ಸ್ಕೂಲ್, ಎಂಇಎಸ್ ಕಿಶೋರ್ ಪಬ್ಲಿಕ್ ಸ್ಕೂಲ್, ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಕೈಂಡ್ ಶಾಲೆಯ ಅನೇಕ ಮಕ್ಕಳು ಈ ಸಂಗೀತ ಕಾರ್ಯಕ್ರಮದಲ್ಲಿ ಸಡಗರ, ಸಂಭ್ರಮದಿಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.