ADVERTISEMENT

ಮತದಾರರ ಜಾಗೃತಿಗೆ ಬಲೂನು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 20:18 IST
Last Updated 22 ಏಪ್ರಿಲ್ 2013, 20:18 IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಉಂಟುಮಾಡಲು ಬಿಬಿಎಂಪಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಪ್ರಮುಖ ಪ್ರದೇಶಗಳಲ್ಲಿ ಮತದಾನದ ಸಂದೇಶ ಸಾರುವ ಬಲೂನುಗಳನ್ನು ಹಾರಿಬಿಟ್ಟಿದೆ.

ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯಂತೆ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ. ಬೆಂಗಳೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಬರುವ ಜಯನಗರ, ಪದ್ಮನಾಭನಗರ, ಬಸವನಗುಡಿ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಮತದಾರರ ಜಾಗೃತಿ ಯೋಜನೆ ಅಡಿಯಲ್ಲಿ ಈ ಬಲೂನುಗಳನ್ನು ಕಟ್ಟಲಾಗಿದೆ.

ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಾದ ಜಯನಗರ 4ನೇ ಬ್ಲಾಕ್ ಬಸ್ ನಿಲ್ದಾಣ, ಜಯದೇವ ಆಸ್ಪತ್ರೆ, ಮಾಗಡಿ ರಸ್ತೆ ಜಂಕ್ಷನ್‌ನ ಟೋಲ್‌ಗೇಟ್ ವೃತ್ತ, ನಾಗರಬಾವಿ ವೃತ್ತದಲ್ಲಿ ಬಲೂನುಗಳು ಹಾರಾಡುತ್ತಿವೆ.

ವಿಜಯನಗರ ಪೊಲೀಸ್ ಠಾಣೆ, ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣ, ರಾಮಕಷ್ಣ ಆಶ್ರಮದ ವೃತ್ತ, ಕತ್ರಿಗುಪ್ಪೆ ಮುಖ್ಯರಸ್ತೆ ಬಿಗ್ ಬಜಾರ್, ಹೊಸೂರು ರಸ್ತೆಯ ಫೋರಂ ಮಾಲ್, ಕೋರಮಂಗಲದ ರಾಷ್ಟ್ರೀಯ ಕ್ರೀಡಾಗ್ರಾಮದ ಬಸ್ ನಿಲ್ದಾಣ, ಹೆಚ್.ಎಸ್.ಆರ್. ಲೇಔಟ್ ಬಿಡಿಎ ಕಾಂಪ್ಲೆಕ್ಸ್, ಪುಟ್ಟೇನಹಳ್ಳಿಯ ಬ್ರಿಗೇಡ್ ಮಿಲೇನಿಯಂ, ಬನಶಂಕರಿ ದೇವಸ್ಥಾನದ ಬಸ್ ನಿಲ್ದಾಣ ಹಾಗೂ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಬಲೂನುಗಳನ್ನು ಹಾರಿಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.