ADVERTISEMENT

ಮನೆ-ಮನೆ ಸಮೀಕ್ಷೆ: ಮನವಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:40 IST
Last Updated 19 ಅಕ್ಟೋಬರ್ 2012, 19:40 IST

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಡೆಂಗೆ ಮತ್ತು ಇತರ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ಕೋರಿದ್ದಾರೆ.

ರೋಗ ತಡೆಗಟ್ಟಲು ಸೊಳ್ಳೆಗಳ ಉತ್ಪತ್ತಿ ತಾಣ ಗುರುತಿಸಿ, ಔಷಧಿಯಿಂದ ನಾಶಪಡಿಸಲು ಪಾಲಿಕೆಯ ಸೊಳ್ಳೆ ನಿಯಂತ್ರಣ ಸಿಬ್ಬಂದಿ ಪ್ರತಿ ಮನೆಗೂ ಭೇಟಿ ನೀಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಂಡದ ಸದಸ್ಯರು ಸಮವಸ್ತ್ರ ಧರಿಸಿ, ಗುರುತಿನ ಚೀಟಿ ಹೊಂದಿರುತ್ತಾರೆ ಮತ್ತು ಎಂ.ಸಿ.ಗ್ಯಾಂಗ್‌ಮೆನ್‌ಗಳು ಕೆಂಪುಬಣ್ಣದ ಮೇಲುಹೊದಿಕೆ ಹಾಕಿರುತ್ತಾರೆ. ಈ ಗ್ಯಾಂಗ್‌ಮೆನ್‌ಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ಸಹಕಾರ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮನೆ ಮನೆಗೆ ತೆರಳಿ, ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷಾ ಕಾರ್ಯ ಮುಂದುವರೆದಿದ್ದು, ಅ. 16ರಿಂದ 19ರ ವರೆಗೆ ಒಟ್ಟು 2,74,421 ಮನೆಗಳಿಗೆ ಭೇಟಿ ನೀಡಿ, ಸಮೀಕ್ಷಾ ಕಾರ್ಯ ನಡೆಸಲಾಗಿದೆ. ಅದರಲ್ಲಿ 8,691 ಸೊಳ್ಳೆ ಉತ್ಪತ್ತಿ ತಾಣ ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.