ಬೆಂಗಳೂರು: ‘ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಮಂಡಳದ ವತಿಯಿಂದ ಇದೇ ಶನಿವಾರ (ಮಾ. 8) ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಂಡಳದ ರಾಜ್ಯ ಘಕಟದ ಅಧ್ಯಕ್ಷೆ ಪುಷ್ಪಾ ಗನ್ನಾ ತಿಳಿಸಿದರು.
ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಂಧಿನಗರದ ತೇರಾಪಂಥ್ ಭವನದಲ್ಲಿ ಕಾರ್ಯಕ್ರಮದ ನಡೆಯಲಿದೆ. ಮಂಡಳದ ವತಿಯಿಂದ ಆಯೋಜಿಸುತ್ತಿರುವ 15ನೇ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಹೆಣ್ಣು ಭ್ರೂಣ ಹತ್ಯೆ ತಡೆ, ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿಸಲು ಬೆಳಿಗ್ಗೆ 9ಕ್ಕೆ ಸಭಾ ಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ್‌್ಯಾಲಿ ನಡೆಯಲಿದೆ.
ಕಾರ್ಯಕ್ರಮ ರದ್ದು
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಮಾರ್ಚ್ ೮ರಂದು ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.