ADVERTISEMENT

ಮಹಿಳೆಯರಲ್ಲಿ ಸೀತೆಯ ದೃಢಸಂಕಲ್ಪ ಮೂಡಲಿ

ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:55 IST
Last Updated 10 ಮಾರ್ಚ್ 2014, 19:55 IST
ಜಲಮಂಡಳಿ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಮುಖ್ಯ ಎಂಜಿನಿಯರ್‌ ಎಸ್‌.ಕೃಷ್ಣಪ್ಪ ಹಾಗೂ ಪ್ರಧಾನ ಎಂಜಿನಿಯರ್‌ ಟಿ.ವೆಂಕಟರಾಜು ಚರ್ಚಿಸಿದರು. ಹಿರಿಯ ನಟಿ ಬಿ.ಸರೋಜಾ ದೇವಿ, ಜಲಮಂಡಳಿ ಅಧ್ಯಕ್ಷ ಎಂ.ಎಸ್‌.ರವಿಶಂಕರ್‌, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಚಿತ್ರದಲ್ಲಿದ್ದಾರೆ 	–ಪ್ರಜಾವಾಣಿ ಚಿತ್ರ
ಜಲಮಂಡಳಿ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಮುಖ್ಯ ಎಂಜಿನಿಯರ್‌ ಎಸ್‌.ಕೃಷ್ಣಪ್ಪ ಹಾಗೂ ಪ್ರಧಾನ ಎಂಜಿನಿಯರ್‌ ಟಿ.ವೆಂಕಟರಾಜು ಚರ್ಚಿಸಿದರು. ಹಿರಿಯ ನಟಿ ಬಿ.ಸರೋಜಾ ದೇವಿ, ಜಲಮಂಡಳಿ ಅಧ್ಯಕ್ಷ ಎಂ.ಎಸ್‌.ರವಿಶಂಕರ್‌, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸೀತೆ ದೃಢತೆಯ ಸಂಕಲ್ಪ. ಅಂತಹ ದೃಢ ಮನೋಭಾವ ಎಲ್ಲ ಹೆಣ್ಣು ಮಕ್ಕಳಲ್ಲಿ ಬೆಳೆಯಬೇಕು’ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.

ಜಲಮಂಡಳಿಯ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಹೆಣ್ಣು ಎಂಬ ಪದ ಕೇಳಿದ ಕೂಡಲೇ   ನೆನಪಾಗುವುದು ಸೀತೆ ಹಾಗೂ ದ್ರೌಪದಿ. ಕೃಷ್ಣ, ಭೀಮ ಹಾಗೂ ಅರ್ಜುನನ ನೆರವಿನಿಂದ ದ್ರೌಪದಿ ತನ್ನ ಸಂಕಲ್ಪ ಈಡೇರಿಸಿಕೊಂಡಳು. ಸೀತೆಯದು ದೃಢ­ಸಂಕಲ್ಪದ ನಿಲುವು. ಎಂತಹ ಸನ್ನಿವೇಶ ಬಂದರೂ ನಿಲುವು ಬದಲು ಮಾಡಿಕೊಳ್ಳ­ಲಿಲ್ಲ. ವಿಚಲಿತಳಾಗಲಿಲ್ಲ’ ಎಂದರು.

‘ಹೆಣ್ಣುಮಕ್ಕಳು ಇಂದು ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಆರ್ಥಿಕ ಸ್ಥಿತಿಯೂ ಸುಧಾರಣೆ ಆಗಿದೆ. ಆದರೆ, ಶೋಷಣೆ ಕಡಿಮೆಯಾಗಿಲ್ಲ. ಪುರುಷರ ಮನೋಭಾವ ಬದಲಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ’ ಎಂದರು.

ಹಿರಿಯ ನಟಿ ಬಿ.ಸರೋಜಾ ದೇವಿ ಕಾರ್ಯಕ್ರಮ ಉದ್ಘಾಟಿಸಿ, ‘ಹೆಣ್ಣು ಮಕ್ಕಳನ್ನು ಈ ಹಿಂದೆ ಕಡೆಗಣಿಸಲಾಗು­ತ್ತಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣು ಪ್ರೀತಿ, ತ್ಯಾಗದ ಸಂಕೇತ. ಹೆಣ್ಣು ಯಾವುದೇ ಸ್ಥಾನಕ್ಕೆ ಹೋದರೂ ತನ್ನ ಕರ್ತವ್ಯ ಮರೆಯಬಾರದು. ಅಹಂ ಬೆಳೆಸಿಕೊಳ್ಳಬಾರದು’ ಎಂದು ಕಿವಿ­ಮಾತು ಹೇಳಿದರು.

ಜಲಮಂಡಳಿಯ ಮುಖ್ಯ ಆಡಳಿತಾ­ಧಿಕಾರಿ ಕಾಶೀನಾಥ್‌ ಪವಾರ್‌, ಮುಖ್ಯ ಎಂಜಿನಿಯರ್‌  ಎಸ್‌.ಎಂ.ಬಸವ­ರಾಜು, ಸಂಘದ ಅಧ್ಯಕ್ಷ ರುದ್ರೇಗೌಡ, ಮಹಿಳಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಬಿ.ಎಸ್‌.ಜಯಲಕ್ಷ್ಮಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.