ADVERTISEMENT

ಮಹಿಳೆ ಸ್ನಾನದ ದೃಶ್ಯ ಸೆರೆ ಆರೋಪ: ಕಾನ್‌ಸ್ಟೇಬಲ್‌ಗೆ ಥಳಿತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 19:30 IST
Last Updated 7 ನವೆಂಬರ್ 2012, 19:30 IST

ಬೆಂಗಳೂರು: ಮಹಿಳೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಆರೋಪದ ಮೇಲೆ ಜೆ.ಪಿ.ನಗರ ಠಾಣೆ ಕಾನ್‌ಸ್ಟೇಬಲ್ ಶ್ರೀನಿವಾಸ್ ಎಂಬುವರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಾರಕ್ಕಿ ಬಳಿಯ ವೀವರ್ಸ್‌ ಕಾಲೊನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

`ರಾತ್ರಿ ಪಾನಮತ್ತರಾಗಿ ಮನೆಗೆ ಬಂದ ಶ್ರೀನಿವಾಸ್, ನೆರೆಮನೆಯ ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕಿಟಕಿ ಮೂಲಕ ನೋಡುತ್ತಿದ್ದ. ಅಲ್ಲದೇ, ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ.  ಈ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಬಂದು ಶ್ರೀನಿವಾಸ್‌ಗೆ ಥಳಿಸಿದರು~ ಎಂದು ಹೆಸರು ಹೇಳಲಿಚ್ಛಿಸದ ಅಲ್ಲಿನ ನಿವಾಸಿಯೊಬ್ಬರು ತಿಳಿಸಿದರು.

ಆದರೆ, ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಜೆ.ಪಿ.ನಗರ ಪೊಲೀಸರು, `ಶ್ರೀನಿವಾಸ್ ರಾತ್ರಿ ಮದ್ಯ ಕುಡಿದಿರಲಿಲ್ಲ ಎಂಬುದು ವೈದ್ಯಕೀಯ ತಪಾಸಣೆಯಿಂದ ಗೊತ್ತಾಗಿದೆ. ಈ ಆರೋಪ ಸುಳ್ಳು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ~ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.