ADVERTISEMENT

ಮಾನ್ಯತಾ ಟೆಕ್ ಪಾರ್ಕ್‌ನಿಂದ ಟ್ರಾಪಿಕ್ ಸಮಸ್ಯೆ: ದೂರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 19:39 IST
Last Updated 7 ನವೆಂಬರ್ 2017, 19:39 IST
ಮಾನ್ಯತಾ ಟೆಕ್ ಪಾರ್ಕ್‌ನಿಂದ ಟ್ರಾಪಿಕ್ ಸಮಸ್ಯೆ: ದೂರು
ಮಾನ್ಯತಾ ಟೆಕ್ ಪಾರ್ಕ್‌ನಿಂದ ಟ್ರಾಪಿಕ್ ಸಮಸ್ಯೆ: ದೂರು   

ಬೆಂಗಳೂರು: ‘ಮಾನ್ಯತಾ ಟೆಕ್ ಪಾರ್ಕ್‌ನಿಂದ ಟ್ರಾಪಿಕ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ’ ಎಂದು ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮಂಗಳವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ದೂರು ನೀಡಿದರು.

‘ಮಾನ್ಯತಾ ಟೆಕ್ ಪಾರ್ಕ್ ನಿರ್ಮಾಣದ ವೇಳೆ ಪ್ರತ್ಯೇಕ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಲ್ಲ. 30 ಸಾವಿರ ಸಿಬ್ಬಂದಿ ಮಾತ್ರ ಕೆಲಸ ಮಾಡಲಿದ್ದಾರೆ ಎಂದು ಅನುಮತಿ ಪಡೆಯಲಾಗಿತ್ತು. ಆದರೆ, 1.50 ಲಕ್ಷ ಸಿಬ್ಬಂದಿ ಈಗ ಕೆಲಸ ಮಾಡುತ್ತಿದ್ದು, ದಿನಕ್ಕೆ 5 ಸಾವಿರಕ್ಕೂ ಹೆಚ್ಚು ವಾಹನಗಳು ಟೆಕ್ ಪಾರ್ಕ್‌ಗೆ ಬರುತ್ತಿವೆ’ ಎಂದು ಅವರು ವಿವರಿಸಿದರು.

ಸುಮಾರು 15 ನಿಮಿಷಗಳ ಕಾಲ ಶಿವರಾಜ್ ಕುಮಾರ್ ದಂಪತಿ ಮತ್ತು ಸ್ಥಳಿಯರ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ‘ಈ ಬಗ್ಗೆ ಸಚಿವ ಕೆ.ಜೆ ಜಾರ್ಜ್ ಜೊತೆ ಚರ್ಚಿಸುತ್ತೇನೆ. ಪೊಲೀಸರಿಗೂ ಸೂಚನೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.