ADVERTISEMENT

ಮಾರ್ಕೆಟ್‌: ಪಾದಚಾರಿ ಮಾರ್ಗದ ಗ್ರಿಲ್‌ ತೆರವು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:44 IST
Last Updated 23 ಡಿಸೆಂಬರ್ 2013, 19:44 IST
ಕೆ.ಆರ್‌.ಮಾರುಕಟ್ಟೆ ಬಳಿಯ ಪಾದಚಾರಿ ಮಾರ್ಗದಲ್ಲಿದ್ದ ಗ್ರಿಲ್‌ಗಳನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ರಾತ್ರಿ ತೆರವುಗೊಳಿಸಿದರು	–ಪ್ರಜಾವಾಣಿ ಚಿತ್ರ
ಕೆ.ಆರ್‌.ಮಾರುಕಟ್ಟೆ ಬಳಿಯ ಪಾದಚಾರಿ ಮಾರ್ಗದಲ್ಲಿದ್ದ ಗ್ರಿಲ್‌ಗಳನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ರಾತ್ರಿ ತೆರವುಗೊಳಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೆ.ಆರ್‌.ಮಾರುಕಟ್ಟೆ ಅಕ್ಕಪಕ್ಕದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿರುವ ಬಿಬಿಎಂಪಿ, ಪಾದ ಚಾರಿ ಮಾರ್ಗದಲ್ಲಿದ್ದ ಗ್ರಿಲ್‌ಗಳನ್ನು ಸೋಮವಾರ ರಾತ್ರಿ ತೆರವುಗೊಳಿಸಿದೆ.

ರಾತ್ರಿ ಎಂಟು ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿದ ಬಿಬಿಎಂಪಿ ಸಿಬ್ಬಂದಿ, ಪಾದಚಾರಿ ಮಾರ್ಗದಲ್ಲಿದ್ದ ಗ್ರಿಲ್‌ಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವು­ಗೊಳಿ­ಸಿದರು. ಇದೇ ಸಂದರ್ಭದಲ್ಲಿ ಮಾರುಕಟ್ಟೆಯ ಎಡಭಾಗದಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವ­ಲಾಯಿತು. ಈ ವೇಳೆ ಕೆಲ ವ್ಯಾಪಾರಿಗಳು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು.

‘ಪಾದಚಾರಿ ಮಾರ್ಗ ಹಾಗೂ ಗ್ರಿಲ್‌ಗಳನ್ನು ತೆರವುಗೊಳಿಸಿ ರಸ್ತೆ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಬಿಬಿಎಂಪಿ ಮುಂದಾಗಿದೆ. ನಮ್ಮ ಗಮನಕ್ಕೂ ತರದೆ ಗ್ರಿಲ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಹೀಗೆ ರಾತ್ರಿ ಏಕಾಏಕಿ ಕಾರ್ಯಾಚರಣೆ ನಡೆಸಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಮಾನವೀ ಯತೆಯಲ್ಲ’ ಎಂದು ವ್ಯಾಪಾರಿ ಗೋಪಾಲ್‌ ದೂರಿದರು.

‘ಗ್ರಿಲ್‌ ತೆರವುಗೊಳಿಸಿ, ರಸ್ತೆಗೆ ಕಾಂಕ್ರಿಟ್‌ ಹಾಕಲಾಗುವುದು. ಮಾರುಕಟ್ಟೆ ಪಕ್ಕದಲ್ಲೇ ಇದ್ದ ಎರಡು ಮಹಡಿಗಳ ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಈ ಕಾರಣಕ್ಕೆ ಅದನ್ನು ಕೆಡವಲಾಗಿದೆ.ಕಾರ್ಯಾಚರಣೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ತೊಂದರೆ-­ಯಿಲ್ಲ. ಬೀದಿ ಬದಿ ವ್ಯಾಪಾ ರಿಗಳನ್ನು ಎತ್ತಂಗಡಿ ಮಾಡುವ ಉದ್ದೇಶ ಪಾಲಿಕೆಗಿಲ್ಲ. ಹೀಗಾಗಿ ವ್ಯಾಪಾರಿಗಳು ಆತಂಕ ಪಡಬಾರದು’ ಎಂದು ಮೇಯರ್‌ ಬಿ.ಎಸ್‌.­ಸತ್ಯನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.