ADVERTISEMENT

ಮೆಜೆಸ್ಟಿಕ್‌ನಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 19:30 IST
Last Updated 15 ಫೆಬ್ರುವರಿ 2011, 19:30 IST

ಬೆಂಗಳೂರು: ಇಲ್ಲಿನ ಮೆಜೆಸ್ಟಿಕ್‌ನಲ್ಲಿ ಸುಮಾರು 1300 ಕೋಟಿ ರೂಪಾಯಿ ವೆಚ್ಚದ ಬಹು ಉದ್ದೇಶಿತ  40 ಅಂತಸ್ತಿನ ಬೃಹತ್ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಂಟು ಕಂಪೆನಿಗಳು ಮುಂದೆ ಬಂದಿದ್ದು, ಸದ್ಯದಲ್ಲೇ ಟೆಂಡರ್ ಅರ್ಜಿಗಳನ್ನೂ ನೀಡಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ ಅವರು ಹೇಳಿದರು.

ಇದೊಂದು ರೀತಿ ಇಂಟಿಗ್ರೇಟೆಡ್ ಟ್ರಾನ್ಸಿಸ್ಟ್ ಹಬ್ (ಬಸ್, ಮೆಟ್ರೊ, ರೈಲ್ವೆ ಸಮಾಗಮ) ಕೂಡ ಆಗಲಿದೆ. ಬಹು ಅಂತಸ್ತಿನ ವಾಣಿಜ್ಯ ಕಟ್ಟಡದ ನೆಲ ಮಹಡಿಯಲ್ಲಿ ವೆುಟ್ರೊ ನಿಲ್ದಾಣ, ಅದರ ಮೇಲೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದ ಸಂಪರ್ಕವನ್ನೂ ನೀಡಲಾಗುತ್ತದೆ.

ಸಾರಿಗೆಗೆ ಸಂಬಂಧಿಸಿದ ಈ ಮೂಲಸೌಲಭ್ಯಗಳ ಜತೆಗೆ ಅದರ ಮೇಲೆ 35ಕ್ಕೂ ಹೆಚ್ಚು ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತದೆ. ಇದು ಸುಮಾರು ಐದು  ವರ್ಷಗಳ ಯೋಜನೆಯಾಗಿದ್ದು, ಹಂತಹಂತವಾಗಿ ನಿರ್ಮಾಣ ಮಾಡಲಾಗುವುದು. ಇದಕ್ಕೆ ಸರ್ಕಾರ ಮೆಜೆಸ್ಟಿಕ್‌ನಲ್ಲಿ ಜಮೀನು ನೀಡುವುದು ಬಿಟ್ಟರೆ ಯಾವುದೇ ಹಣ ಪಾವತಿಸುವುದಿಲ್ಲ. ಎಲ್ಲವೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.