ADVERTISEMENT

ಮೆಟ್ರೊ: 6 ನಿಲ್ದಾಣಗಳಲ್ಲಿ

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಬೆಂಗಳೂರು: ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗಿನ ರೀಚ್- 1ರ ಮಾರ್ಗದಲ್ಲಿ ಮೆಟ್ರೊ ರೈಲು ಮಾರ್ಗದ ಆರು ನಿಲ್ದಾಣಗಳಲ್ಲಿ 12 ಎಟಿಎಂ ಯಂತ್ರಗಳನ್ನು ಅಳವಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಟೆಂಡರ್ ಕರೆದಿದೆ.

ನಗರ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಎಟಿಎಂ ಜಾಲವನ್ನು ಹೊಂದಿರುವ ಯಾವುದೇ ಬ್ಯಾಂಕ್, ವೆುಟ್ರೊ ರೈಲು ನಿಲ್ದಾಣಗಳಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಇತ್ತೀಚಿಗೆ ತಿಳಿಸಲಾಗಿದೆ.

ತಲಾ ಒಂದು ನಿಲ್ದಾಣದಲ್ಲಿ ಎರಡು ಎಟಿಎಂಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಪ್ರವೇಶದ್ವಾರಗಳ ಬಳಿ ಇವುಗಳನ್ನು ಸ್ಥಾಪಿಸಲಾಗುವುದು. ಎರಡೂ ಎಟಿಎಂಗಳಿಗೂ ಬ್ಯಾಂಕ್‌ಗಳು ಬಿಡ್ ಮಾಡಬೇಕಿದ್ದು ಒಂದಕ್ಕೆ ಬಿಡ್ ಮಾಡಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.

ರದ್ದು: ವಿಳಂಬ ಧೋರಣೆ ಅನುಸರಿಸುತ್ತಿದ್ದ ನಿರ್ಮಾಣ ಕಂಪೆನಿಯೊಂದಕ್ಕೆ ಬಿಎಂಆರ್‌ಸಿಎಲ್ ಕೊಕ್ ನೀಡಿದೆ. ನಿಧಾನಗತಿಯ ಹಾಗೂ ತೃಪ್ತಿದಾಯಕವಲ್ಲದ ಕಾಮಗಾರಿಯಿಂದಾಗಿ ಇಆರ್‌ಎ ಬ್ಯುಲ್ಡಿಂಗ್ ಸಿಸ್ಟಮ್ಸ್ ಎಂಬ ಖಾಸಗಿ ಕಂಪೆನಿಯನ್ನು ಬಿಎಂಆರ್‌ಸಿಎಲ್ ಕಾಮಗಾರಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.