ಬೆಂಗಳೂರು: ‘ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ವರ್ಲ್ಡ್ 10ಕೆ ಬೆಂಗಳೂರು ಮ್ಯಾರಥಾನ್’ ಮೇ.18ರಂದು ನಡೆಯಲಿದ್ದು, ಓಟದಲ್ಲಿ ಭಾಗವಹಿಸುವವರು ಏ.26ರೊಳಗೆ ಅರ್ಜಿ ಸಲ್ಲಿಸಬಹುದು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಸಿಎಸ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಚಂದ್ರಶೇಖರ್ ಈ ವಿಷಯ ತಿಳಿಸಿದರು.
‘ಸಂಸ್ಥೆಯ ಏಳನೇ ಆವೃತ್ತಿಯ ಓಟದ ಸ್ಪರ್ಧೆ ಮೆ.18ಕ್ಕೆ ನಿಗದಿಯಾಗಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ.
ಪ್ರಸ್ತುತ 20 ದೇಶಗಳಿಂದ 23,000 ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು. ಓಟದಲ್ಲಿ ಪಾಲ್ಗೊಳ್ಳಲು ಬಯಸುವವರು ಆನ್‌ಲೈನ್ ಮುಖಾಂತರ ಹೆಸರನ್ನು ನೋಂದಣಿ ಮಾಡಿಸಬಹುದು. ವೆಬ್‌ಸೈಟ್ ವಿಳಾಸ www.tcsworld10k.procamrunning
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.