ADVERTISEMENT

ಮೇ 4ರಿಂದ ಶಂಕರ ಜಯಂತಿ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಬೆಂಗಳೂರು: ಇಲ್ಲಿಯ ಕಿರ್ಲೋಸ್ಕರ್ ಕಾಲೋನಿಯ ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್‌ನ 40ನೇ ವರ್ಷದ ಭಗವತ್ ಶಂಕರ ಜಯಂತಿ ಸಂಗೀತೋತ್ಸವ ಸಮಾರಂಭ ಮೇ 4ರಿಂದ ಆರಂಭವಾಗಲಿದ್ದು, ಹಿರಿಯ ಗಾಯಕಿ, ವಿದುಷಿ ಎಂ.ಎಸ್.ಶೀಲಾ ಅವರು ಸಂಗೀತೋತ್ಸವದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್‌ನ ಕೋಶಾಧಿಕಾರಿ ಬಿ.ಕೆ.ಚಂದ್ರಮೌಳಿ ಪ್ರಕಟಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಾಜಿನಗರದ ಶ್ರೀವಾಣಿ ವಿದ್ಯಾಕೇಂದ್ರದಲ್ಲಿ ಸಂಗೀತೋತ್ಸವ ನಡೆಯಲಿದ್ದು, ಮೇ 4ರಂದು ಸಂಜೆ ಟ್ರಸ್ಟ್‌ನ ಅಧ್ಯಕ್ಷ ಎಲ್.ಎಸ್.ಶ್ಯಾಮಸುಂದರ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು’ ಎಂದು ಹೇಳಿದರು.

ಮೇ 8ರಂದು ನಡೆಯಲಿರುವ ಸಮಾರೋಪದಲ್ಲಿ ಎಂ.ಎಲ್.ಶೀಲಾ ಅವರಿಗೆ ಕಲಾಭೂಷಣ ಬಿರುದು, ಗಾಯಕಿ ಪದ್ಮಾಮೂರ್ತಿ, ಸಂಗೀತಗಾರ್ತಿ ರೇವತಿಮೂರ್ತಿ, ಕಲಾ ಸಂಘಟಕ ಮುಂಬೈನ ಬಿ.ನಾಗಭೂಷಣ, ವೇದ ಪಂಡಿತ ಜಿ.ಎ.ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಪ್ರತಿದಿನ ಸಂಜೆ 6.30ರಿಂದ ರಾತ್ರಿ 9ರವರೆಗೆ ವಿವಿಧ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.