ADVERTISEMENT

‘ಮೈಸೂರು ಬ್ಯಾಂಕ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬೇಕಿತ್ತು’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 20:08 IST
Last Updated 6 ಅಕ್ಟೋಬರ್ 2017, 20:08 IST
ಕವಿ ದೊಡ್ಡರಂಗೇಗೌಡ ಹಾಗೂ ಸಮುದಾಯದ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ರಾವ್ ಅವರು ಮಾತುಕತೆ ನಡೆಸಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿನೇಶ್ ಎ. ಪಾಟೀಲ್ ಇದ್ದಾರೆ – ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಅವರು ಜತೆಗೂಡಿ ಸ್ಥಾಪಿಸಿದ ಮೈಸೂರು ಬ್ಯಾಂಕ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬೇಕಿತ್ತು’ ಎಂದು ಕವಿ ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟರು.

ಮೈಸೂರು ಬ್ಯಾಂಕಿನ ಪಿಂಚಣಿದಾರರ ಸಮುದಾಯವು ನಗರದಲ್ಲಿ ಆಯೋಜಿಸಿದ್ದ ಮೈಸೂರು ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆಲೋಚನೆಗಳು ಏನೇ ಇರಬಹುದು. ಆದರೆ, ವೈಯಕ್ತಿಕವಾಗಿ ನನಗೆ ಮೈಸೂರು ಬ್ಯಾಂಕ್ ಎಂಬುದೇ ಇಷ್ಟ. ಆ ಹೆಸರು ಕೇಳಿದಾಕ್ಷಣ ಕನ್ನಡತನದ ಸಂಚಲನ ಮೂಡುತ್ತದೆ’ ಎಂದು ಹೇಳಿದರು.

ADVERTISEMENT

**

ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಎಲ್ಲೆಡೆ ನುಂಗಾಸುರರೇ ಇದ್ದಾರೆ. ಅಧಿಕಾರಕ್ಕೆ ಬರುವಾಗ ಪುಟ್ಟ ಇಲಿ. ಅಧಿಕಾರಕ್ಕೇರಿದ ಬಳಿಕ ಹೆಗ್ಗಣ. ಆಮೇಲೆ ತಿಮಿಂಗಲ. ಇದು ನುಂಗಾಸುರರ ಕಾರ್ಯದ ವೈಖರಿ
- ದೊಡ್ಡರಂಗೇಗೌಡ, ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.