ADVERTISEMENT

‘ಯುವಜನತೆ ದಾರಿತಪ್ಪಿದರೆ ಸಮಾಜಕ್ಕೆ ಅಪಾಯ’

​ಪ್ರಜಾವಾಣಿ ವಾರ್ತೆ
Published 9 ಮೇ 2018, 20:11 IST
Last Updated 9 ಮೇ 2018, 20:11 IST

ಬೆಂಗಳೂರು: ‘ಬದುಕಿನ ಅಡಿಪಾಯವೇ ಬಾಲ್ಯ. ಮಕ್ಕಳು ತಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸಿಕೊಳ್ಳಬೇಕು’ ಎಂದು ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ.ಆರೂಢ ಭಾರತೀ ಸ್ವಾಮೀಜಿ ತಿಳಿಸಿದರು.

ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ನಡೆದ ‘ವ್ಯಕ್ತಿತ್ವ ವಿಕಾಸ ಸಂಗಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಇಂದಿನ ಯುವಜನತೆ ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗುತ್ತಿದ್ದಾರೆ. ಐಷಾರಾಮಿ ಜೀವನ ಶೈಲಿಗೆ ಮೊರೆ ಹೋಗಿದ್ದಾರೆ. ನೈತಿಕತೆ, ಕಠಿಣ ಪರಿಶ್ರಮದಿಂದ ಕೆಲಸ ಮಾಡುವವರು ಕಣ್ಮರೆಯಾಗುತ್ತಿದ್ದಾರೆ. ಇದಕ್ಕೆ ಪಾಲಕರು, ಸಮಾಜದ ಹಿರಿಯರೇ ಹೊಣೆ’ ಎಂದರು.

ADVERTISEMENT

ಸಿಲಿಕಾನ್‌ ಸಿಟಿ ಕಾಲೇಜಿನ ಪ್ರಾಂಶುಪಾಲ ವಿ.ರಘು, ‘ವಿಕಾಸ ಸಂಗಮದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಹೆಚ್ಚು ಅಗತ್ಯವಿದ್ದು, ಸಮಾಜ ಇಂಥ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಆತ್ಮಾನಂದ ಭಾರತೀ ಸ್ವಾಮಿಜಿ, ಅಮೋಘಪ್ಪ ಶಾಸ್ತ್ರೀ, ಚಿತ್ರ ನಿರ್ದೇಶಕ ರಾಜಾ ರವಿಶಂಕರ, ಯೋಗ ಗುರೂಜಿ ರಾಜಶೇಖರ್ ಅವರು ಸಮಾರಂಭದಲ್ಲಿ ಮಾತನಾಡಿದರು. ವೇದೋಪಾಸಕಿ ಪಿ.ಭ್ರಮರಾಂಬಾ ಮಹೇಶ್ವರಿ ಶಿಬಿರಾರ್ಥಿಗಳಿಗೆ ಸಂಕಲ್ಪ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.