ADVERTISEMENT

ಯೋಜನೆಗಳ ಜಾರಿ:ಸರ್ಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಕೃಷ್ಣರಾಜಪುರ:  `ಜನರ ಬದುಕನ್ನು ಉತ್ತಮಪಡಿಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಬಡವರು, ರೈತರು, ಅಲ್ಪಸಂಖ್ಯಾತರ ಬದುಕು ಹೀನಾಯ ಸ್ಥಿತಿ ತಲುಪಿದೆ~ ಎಂದು ಸಿಪಿಎಂ ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆರೋಪಿಸಿದರು.

ಪಕ್ಷದ ಬೆಂಗಳೂರು ಪೂರ್ವ ವಲಯ ಘಟಕದಿಂದ ಮುನೇಶ್ವರ ನಗದರಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳ ಜನ ವಿರೋಧಿ ನಿಲುವನ್ನು ಹೋರಾಟದ ಮೂಲಕ ಎದುರಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಘಟಕದ ಅಧ್ಯಕ್ಷ ಟಿ.ಡಿ.ರಾಮಕೃಷ್ಣ, ಪಕ್ಷದ ಉಪಾಧ್ಯಕ್ಷ ಎಚ್.ಎನ್.ಗೋಪಾಲಗೌಡ ಮಾತನಾಡಿದರು. ಕಾರ್ಯದರ್ಶಿ ಗೌರಮ್ಮ, ಸಂಚಾಲಕರಾದ ವಾರಿಯರ್, ರಾಮಚಂದ್ರ, ನಂಜೇಗೌಡ, ಕೆ.ಆರ್.ವೆಂಕಟೇಶ ಗೌಡ ಮುಂತಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.