ADVERTISEMENT

ರಸ್ತೆಯಲ್ಲೇ ಮಲಗಿದ ಹಾವು; ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2018, 19:30 IST
Last Updated 14 ಮೇ 2018, 19:30 IST

ಬೆಂಗಳೂರು: ಯಶವಂತಪುರದ ಮೈಸೂರು ಸ್ಯಾಂಡಲ್‌ ಸೋಪ್ ಫ್ಯಾಕ್ಟರಿ ಬಳಿಯ ಕೆಳಸೇತುವೆಯಲ್ಲಿ ನಾಗರ ಹಾವೊಂದು ಮಲಗಿದ್ದರಿಂದ ವಾಹನಗಳ ದಟ್ಟಣೆ ಉಂಟಾಯಿತು.

ಕೆಳಸೇತುವೆಯಲ್ಲಿ ರಸ್ತೆ ದಾಟುತ್ತಿದ್ದ ಹಾವಿನ ಮೇಲೆ ವಾಹನವೊಂದು ಹಾದು ಹೋಗಿತ್ತು. ಅದರಿಂದ ಹಾವಿನ ಹಿಂಭಾಗದ ಬಾಲಕ್ಕೆ ಗಾಯವಾಗಿ, ರಕ್ತ ಬರಲಾರಂಭಿಸಿತ್ತು. ಮುಂದೆ ಹೋಗಲು ಸಾಧ್ಯವಾಗದೆ ರಸ್ತೆ ಮಧ್ಯೆದಲ್ಲೇ ಹಾವು ಮಲಗಿಕೊಂಡಿತು.

ಅದೇ ಮಾರ್ಗವಾಗಿ ಹೊರಟಿದ್ದ ಚಾಲಕರು, ಹಾವು ಗಮನಿಸಿ ವಾಹನಗಳನ್ನು ನಿಲ್ಲಿಸಿದರು. ಎಷ್ಟೇ ಪ್ರಯತ್ನಿಸಿದರೂ ಹಾವು ಜಾಗ ಬಿಟ್ಟು ಹೋಗಲಿಲ್ಲ. ಇದರಿಂದ ಕೆಳೆಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಯಶವಂತಪುರ ಬಸ್ ನಿಲ್ದಾಣ, ಪಶ್ಚಿಮ ಕಾರ್ಡ್‌ ರಸ್ತೆ ಹಾಗೂ ಸುತ್ತಮುತ್ತ ದಟ್ಟಣೆ ಉಂಟಾಯಿತು.

ADVERTISEMENT

ಅರ್ಧ ಗಂಟೆ ಬಳಿಕ ಹಾವು ರಸ್ತೆಯಿಂದ ಪಕ್ಕದ ಪೊದೆಯೊಳಗೆ ಹೋಯಿತು. ಬಳಿಕವೇ ವಾಹನಗಳ ಸಂಚಾರ ಯಥಾಪ್ರಕಾರ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.