ಪ್ರಜಾವಾಣಿ ಫಲಶ್ರುತಿ
ಮಹದೇವಪುರ: ವೈಟ್‌ಫೀಲ್ಡ್ ಸಮೀಪದ ಇಸಿಸಿ ರಸ್ತೆಯ ಪಕ್ಕದ ಚರಂಡಿ ನಿರ್ಮಾಣಕ್ಕಾಗಿ ಬಿಬಿಎಂಪಿಯು ನಡುರಸ್ತೆಯಲ್ಲಿ ಸುರಿದಿದ್ದ ಜಲ್ಲಿ ಮತ್ತು ಮರಳು ಸಾಮಗ್ರಿಗಳನ್ನು ತೆರವುಗೊಳಿಸಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಒಂದು ತಿಂಗಳಿಂದಲೂ ಇಸಿಸಿ ರಸ್ತೆಯಲ್ಲಿ ಬಿಬಿಎಂಪಿಯು ಚರಂಡಿ ಕಾಮಗಾರಿಗಾಗಿ ತಂದಿದ್ದ ಜಲ್ಲಿ ಮತ್ತು ಮರಳನ್ನು ನಡು ರಸ್ತೆಯಲ್ಲಿ ಸುರಿದಿತ್ತು. ಇದರಿಂದಾಗಿ ನಿತ್ಯವೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು.
ಈ ಬಗ್ಗೆ ಸ್ಥಳೀಯರು ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತು `ಪ್ರಜಾವಾಣಿ~ಯಲ್ಲಿ ಫೆ. 23ರಂದು `ಚರಂಡಿ ಕಾಮಗಾರಿ: ಸಂಚಾರಕ್ಕೆ ಅಡ್ಡಿ~ ಎಂಬ ಶೀರ್ಷಿಕೆಯಡಿ ಚಿತ್ರ ಸಮೇತ ವರದಿ ಪ್ರಕಟಗೊಂಡಿತ್ತು. ಬಳಿಕ ಎಚ್ಚೆತ್ತುಕೊಂಡ ಪಾಲಿಕೆಯು ಕೂಡಲೇ ನಡುರಸ್ತೆಯಲ್ಲಿದ್ದ ಜಲ್ಲಿ ಮತ್ತು ಮರಳು ತೆರವುಗೊಳಿಸಿದೆ. ಅಲ್ಲದೆ, ಪಾಲಿಕೆಯು ಚರಂಡಿ ಕಾಮಗಾರಿಯನ್ನೂ ಚುರುಕುಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.