ADVERTISEMENT

ರಾಗಿ ಹೋಲದಲ್ಲಿ ಕೀಟಭಾಧೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:37 IST
Last Updated 3 ಅಕ್ಟೋಬರ್ 2017, 19:37 IST

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಹಲವೆಡೆ ರಾಗಿ ಹೊಲದಲ್ಲಿ ‘ಹಸಿರು ಗೇನು ಹುಳುಗಳ ಬಾಧೆ ಕಂಡುಬಂದಿದ್ದು, ಇದರಿಂದ ಸಾಕಷ್ಟು ರಾಗಿ ಬೆಳೆ ಹಾನಿಯಾಗಿದೆ.

ಈ ಕುರಿತು ರೈತರು ಸೋಂಪುರ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಈ ಬಗ್ಗೆ ಪರಿಶೀಲಿಸಲು ಮಂಗಳವಾರ ಕೃಷಿ ಅಧಿಕಾರಿಗಳು, ವಿಜ್ಞಾನಿಗಳ ತಂಡ ಹೊಸಹಳ್ಳಿಯ ರೈತ ರಾಮಯ್ಯ ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಕೊಂಡಿ, ‘ಹಸಿರು ಗೇನು ಹುಳು ಇದಾಗಿದ್ದು, ರಾಗಿ ಪೈರಿನ ಗರಿ ತಿನ್ನುತ್ತದೆ. ಇದರಿಂದ ಫಸಲು ಕಡಿಮೆಯಾಗುತ್ತದೆ. ಇದನ್ನು ಹತೋಟಿಗೆ ತರಲು 1 ಲೀಟರ್ ನೀರಿಗೆ 2 ಎಂ.ಎಮ್ ಕ್ಲೋರೋಫೈರಿಪಾಸ್ ಅಥವಾ ಟುನಾಲ್ಪಾಸ್ ಹಾಕಿ ಕೀಟಗಳು ಹೆಚ್ಚಿರುವ ಸಮಯದಲ್ಲಿ ಸಿಂಪಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಒಂದು ಎಕರೆ ಪ್ರದೇಶಕ್ಕೆ 200 ಲೀಟರ್ ನೀರು 400 ಎಂ.ಎಲ್. ಔಷಧಿ ಬೇಕು. ಇನ್ನು ಹೊಲಗಳಲ್ಲಿ ಚಿಟ್ಟೆ ಹುಳುವಿನ ಬಾಧೆ ಕಂಡುಬಂದಾಗ ಮೆಲಾಥಿಯನ್ ಅಥವಾ ಪೆನ್ವಲಿರೇಟ್ ಸಿಂಪಡಿಸಬೇಕು. ಎಕರೆಗೆ 8 ರಿಂದ 10 ಕೆ.ಜಿ ಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.