ADVERTISEMENT

ರಾಜಮಹಲ್‌ವಿಲಾಸ ಸಭಾ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 19:40 IST
Last Updated 25 ಫೆಬ್ರುವರಿ 2011, 19:40 IST


ಬೆಂಗಳೂರು: ಶನಿವಾರ ಸಂಜೆ 5.30ಕ್ಕೆ ಅಶೋಕ್ ಹಾರ್ನಹಳ್ಳಿ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನಂತರ ಟಿ.ಎಸ್. ಸತ್ಯವತಿ ಹಾಡುಗಾರಿಕೆ. ನಳಿನಾ ಮೋಹನ್ (ಪಿಟೀಲು), ಅರ್ಜುನ ಕುಮಾರ್ (ಮೃದಂಗ), ಸುಕನ್ಯಾ ರಾಮಗೋಪಾಲ್ (ಘಟ) ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಭಾನುವಾರ ಬೆಳಿಗ್ಗೆ 10 ಗಂಟೆಗೆ ಆರಾಧನಾ ಮಹೋತ್ಸವದಲ್ಲಿ ಗಾಯತ್ರಿ ಸುಂದರ್‌ರಾವ್ ಅವರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಕಿರಿಯ ಮತ್ತು ಹಿರಿಯ ಕಲಾವಿದರಿಂದ ಸಂಗೀತ ಸೇವೆ, ಮಧ್ಯಾಹ್ನ 12.30ಕ್ಕೆ ಕೊಳಲು ವಿದ್ವಾನ್ ಡಾ. ಶ್ರೀಧರ್ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಸಂಜೆ 5.30ಕ್ಕೆ ಕರ್ನಾಟಕ ಗಾನಗೋಷ್ಠಿಯಲ್ಲಿ ಪದ್ಮಭೂಷಣ ಟಿ.ವಿ. ಶಂಕರನಾರಾಯಣನ್ (ಹಾಡುಗಾರಿಕೆ), ನಗೈ ಆರ್. ಶ್ರೀರಾಂ (ಪಿಟೀಲು), ಪಲ್ಲದಮ್ ಆರ್ ರವಿ (ಮೃದಂಗ), ತಿರುಚಿ ಎಸ್. ಕೃಷ್ಣನ್ (ಘಟ) ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.