ADVERTISEMENT

ರಾಮಯ್ಯ ವಿ.ವಿ: ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 19:49 IST
Last Updated 1 ಮಾರ್ಚ್ 2019, 19:49 IST
‘ಅಕೈರಾ–2019’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಪಡಿಸಿದರು
‘ಅಕೈರಾ–2019’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಪಡಿಸಿದರು   

ಬೆಂಗಳೂರು: ಎಂ.ಎಸ್‌.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ‘ಅಕೈರಾ–2019’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.

ಕಾರ್ಯಕ್ರಮವನ್ನು ಸಿನಿಮಾ ನಿರ್ದೇಶಕ ಯೋಗರಾಜ್‌ ಭಟ್‌ ಉದ್ಘಾಟಿಸಿದರು.

‘ವಿಜ್ಞಾನ ಎಲ್ಲ ಕ್ಷೇತ್ರಗಳಲ್ಲಿ ಇದೆ. ವಿಜ್ಞಾನವಿಲ್ಲದೆ ಯಾವುದೇ ವಿಷಯವೂ ಪರಿಪೂರ್ಣ ಆಗುವುದಿಲ್ಲ. ಸಿನಿಮಾದಲ್ಲೂ ವಿಜ್ಞಾನ ಹಾಸುಹೊಕ್ಕಾಗಿದೆ’ ಎಂದು ಭಟ್‌ ಹೇಳಿದರು.

ADVERTISEMENT

‘ಸಿನಿಮಾದಲ್ಲಿ ಸಾಹಿತ್ಯವನ್ನು ಒಬ್ಬರು ರಚಿಸುತ್ತಾರೆ. ಮತ್ತೊಬ್ಬರು ಸಂಗೀತ ಸಂಯೋಜನೆ ಮಾಡುತ್ತಾರೆ. ಚಿತ್ರಕಥೆ, ನಿರ್ದೇಶನ ಸೇರಿಯೂ ಸಿನಿಮಾ ರೂಪುಗೊಳ್ಳುತ್ತದೆ. ಇದೇ ರೀತಿ ವಿದ್ಯಾರ್ಥಿಗಳು ಟೀಂ ವರ್ಕ್‌ ಮಾಡಿದರೆ ಯಶಸ್ಸು ಸಿಗುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲ ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳು ಆಗಲಿದ್ದಾರೆ’ ಎಂದು ಅವರು ಆಶಿಸಿದರು.

‘ನಾವೆಲ್ಲ ಪ್ರತಿ ಐದು ನಿಮಿಷಕ್ಕೆ ಒಮ್ಮೆ ಮೊಬೈಲ್‌ ನೋಡುತ್ತಿದ್ದೇವೆ. ನೀವೆಲ್ಲ ಮೊಬೈಲ್‌ಗೆ ದಾಸರಾಗಬೇಡಿ. ಸಾಧ್ಯವಾದಷ್ಟು ಮೊಬೈಲ್‌ ಅನ್ನು ಕಡಿಮೆ ಬಳಸಿ’ ಎಂದು ಕಿವಿಮಾತು ಹೇಳಿದರು.ಈ ವೇಳೆ ‘ಪಂಚತಂತ್ರ’ ಸಿನಿಮಾದ ಟ್ರೇಲರ್‌ ಬಿತ್ತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.