ADVERTISEMENT

ರಾಷ್ಟ್ರೀಯ ಯುವ ದಿನಾಚಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 18:50 IST
Last Updated 14 ಜನವರಿ 2012, 18:50 IST

ಬೆಂಗಳೂರು: `ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 72 ರಷ್ಟು ಯುವಕರೇ ಇರುವುದು ಭಾರತದ ಭಾಗ್ಯ~ ಎಂದು ಇಂಟಲೆಕ್ಟ್ ಔಟ್ ಸೋರ್ಸ್ ಕಂಪೆನಿಯ ಮುಖ್ಯಸ್ಥರಾದ ಅಶೋಕ್ ಮಹೇಶ್ವರಿ ಹೇಳಿದರು. ನಗರದ ಬಿಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

`ಯುವ ಹಾಡುಗಾರ ಶಂಕರ್ ಮಹದೇವನ್ ಓದಿದ್ದು ಎಂಜಿನಿಯರಿಂಗ್. ಹಾಗೆಯೇ ಯುವ ಸಂಗೀತ ನಿರ್ದೇಶಕ ರಿಖೀ ಕೇಜ್ ದಂತ ವೈದ್ಯಕೀಯ ಪದವೀಧರ. ಆದರೆ ಇವರಿಬ್ಬರೂ ಕಿರಿ ವಯಸ್ಸಿನಲ್ಲಿ ಸಾಧನೆ ಮಾಡಿದ್ದು ಸಂಗೀತ ಕ್ಷೇತ್ರದಲ್ಲಿ. ಹೀಗೆ ಹಲವರು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧವಿರದ ವೃತ್ತಿಯನ್ನು ಆಯ್ದುಕೊಂಡು ಅದರಲ್ಲಿ ಯಶಸ್ಸು ಗಳಿಸಿದ್ದಾರೆ~ ಎಂದು ತಿಳಿಸಿದರು.

ಬೆಂಗಳೂರು ರೋಟರಿ ಅಧ್ಯಕ್ಷ ಎನ್.ಎಸ್. ಶ್ರೀನಿವಾಸಮೂರ್ತಿ ಮಾತನಾಡಿ, ಸಂತೋಷ ಎನ್ನುವುದು ನಮ್ಮ ಕೈಯಲ್ಲೇ ಇದೆ. ಅದನ್ನು ನಾವೇ ರೂಪಿಸಿಕೊಳ್ಳಬೇಕು~ ಎಂದರು. ಎಂಇಎಸ್ ಕಾಲೇಜಿನ ಸಂಸ್ಥಾಪಕ ಲಕ್ಕೇಗೌಡ, `ಕಠಿಣ ಪರಿಶ್ರಮದಿಂದ ಉತ್ತಮ ಕೆಲಸಗಳನ್ನು ಮಾಡುವುದರ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು~ ಎಂದರು .

ಯುವ ಸಂಗೀತ ನಿರ್ದೇಶಕ ರಿಖೀ ಕೇಜ್ ಅವರನ್ನು ಗೌರವಿಸಲಾಯಿತು. ಬಿಇಎಸ್ ಕಾಲೇಜಿನ ಪ್ರಾಂಶುಪಾಲ ಟಿ. ನಾರಾಯಣಪ್ಪ, ಕೆಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಬಿ. ಜಯರಾಂ, ಜಯನಗರ ರೋಟರಿ ಅಧ್ಯಕ್ಷ ವೆಂಕಟಾಚಲಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.