ಬೆಂಗಳೂರು: ರೈತರೊಬ್ಬರ ಹೆಸರಿಗೆ ಜಮೀನು ಮಂಜೂರು ಮಾಡಲು 10 ಸಾವಿರ ರೂಪಾಯಿ ಲಂಚ ಕೇಳಿದ ಭೂಸ್ವಾಧೀನ ಮಂಜೂರಾತಿ ಇಲಾಖೆಯ ಶಾಖಾಧಿಕಾರಿ ವೈ.ಎನ್. ರುದ್ರಪ್ಪ ಅವರಿಗೆ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ 14 ತಿಂಗಳ ಕಠಿಣ ಶಿಕ್ಷೆ ಮತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ.
ತಿಮ್ಮರಾಯಪ್ಪ ಎಂಬುವರು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಐಮರೆಡ್ಡಿ ಹಳ್ಳಿಯಲ್ಲಿ 35 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ಉಳುಮೆ ನಡೆಸುತ್ತಿದ್ದರು.
ಇ ಸರ್ಕಾರಿ ಜಮೀನನ್ನು ಸಕ್ರಮಗೊಳಿಸಿ ತಿಮ್ಮರಾಯಪ್ಪ ಅವರ ಹೆಸರಿಗೆ ಮಾಡಿಕೊಡಲು, ರುದ್ರಪ್ಪ ಅವರು ಲಂಚ ಕೇಳಿದ್ದರು. ಲಂಚ ಕೊಡಲು ಮನಸ್ಸು ಮಾಡದ ತಿಮ್ಮರಾಯಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ರುದ್ರಪ್ಪ ಅವರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.