ADVERTISEMENT

ರೈಲಿನ ಮೇಲೆ ಕಲ್ಲೆಸೆಯಬೇಡಿ

ವಿಶೇಷ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:29 IST
Last Updated 15 ಡಿಸೆಂಬರ್ 2013, 19:29 IST
ರೈಲುಗಳ ಮೇಲೆ ಕಲ್ಲು ಎಸೆಯದಂತೆ ಅರಿವು ಮೂಡಿಸುವ ಸಲುವಾಗಿ ನೈರುತ್ಯ ರೈಲ್ವೆ ಅಧಿಕಾರಿಗಳು ನಗರದಲ್ಲಿ  ಶನಿವಾರ ಹಮ್ಮಿಕೊಂಡಿದ್ದ ಆಂದೋಲನದಲ್ಲಿ ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್‌) ಸಿಬ್ಬಂದಿ ಮಕ್ಕಳಿಗೆ  ಕರಪತ್ರ ಹಂಚಿದರು	– ಪ್ರಜಾವಾಣಿ ಚಿತ್ರ
ರೈಲುಗಳ ಮೇಲೆ ಕಲ್ಲು ಎಸೆಯದಂತೆ ಅರಿವು ಮೂಡಿಸುವ ಸಲುವಾಗಿ ನೈರುತ್ಯ ರೈಲ್ವೆ ಅಧಿಕಾರಿಗಳು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಂದೋಲನದಲ್ಲಿ ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್‌) ಸಿಬ್ಬಂದಿ ಮಕ್ಕಳಿಗೆ ಕರಪತ್ರ ಹಂಚಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಚಲಿಸುವ ರೈಲುಗಳ ಮೇಲೆ ಕಲ್ಲು ಎಸೆಯದಂತೆ ಅರಿವು ಮೂಡಿಸುವ ಸಲುವಾಗಿ ನೈರುತ್ಯ ವಿಭಾಗದ ರೈಲ್ವೆ ಅಧಿಕಾರಿಗಳು ನಗರದಲ್ಲಿ ಶನಿವಾರ ವಿಶೇಷ ಅಭಿಯಾನ ನಡೆಸಿದರು.

‘ಬೆಂಗಳೂರು– ಕೆಂಗೇರಿ ಮಾರ್ಗದಲ್ಲಿ ಚಲಿಸುವ ರೈಲುಗಳ ಮೇಲೆ ಕಲ್ಲು ಎಸೆಯುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಆ ಭಾಗದ ಜನರಲ್ಲಿ ಅರಿವು ಮೂಡಿಸಲು ಅಭಿಯಾನವನ್ನು ನಡೆಸಲಾಯಿತು. ಸ್ಥಳೀಯರು ಹಾಗೂ ಮಕ್ಕಳಿಗೆ ಕರ ಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ವರ್ಷ ಬೆಂಗಳೂರು–ಮೈಸೂರು ಮಾರ್ಗದಲ್ಲಿ ಚಲಿಸುವ ರೈಲಿನ ಮೇಲೆ ಕಲ್ಲು ಎಸೆದ ಸಂಬಂಧ ಆರು ಪ್ರಕರಣಗಳು ದಾಖಲಾಗಿವೆ. ಈ ಪ್ರತ್ಯೇಕ ಪ್ರಕರಣಗಳಲ್ಲಿ ಲೋಕೊ ಪೈಲಟ್‌ಗಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯರು ಅಥವಾ ಮಕ್ಕಳು ಲೋಕೊ ಪೈಲೆಟ್‌ ಮೇಲೆ ಎಸೆಯುವ ಒಂದು ಕಲ್ಲಿನಿಂದ ಸಾವಿರಾರು ಪ್ರಯಾಣಿಕರು ಸಾವನ್ನಪ್ಪುವ ಸನ್ನಿವೇಶ ನಿರ್ಮಾಣ­ವಾಗ­ಬಹುದು ಎಂಬ ವಿಷಯವನ್ನು ಇದೇ ವೇಳೆ ತಿಳಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲೂ ಜಾಗೃತಿ ಕಾರ್ಯಕ್ರಮ­ಗಳನ್ನು ನಡೆಸ­ಲಾಗು­ವುದು’ ಎಂದು ಅಧಿಕಾರಿಗಳು ಹೇಳಿದರು.

ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಾ­ಕೃಷ್ಣ, ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್‌) ವಿಭಾಗೀಯ ಭದ್ರತಾ ಆಯುಕ್ತ ಲೂಯಿಸ್‌ ಅಮೂಥನ್, ವಿಭಾಗೀಯ ಭದ್ರತಾಧಿಕಾರಿ ಪ್ರವೀಣ್ ಪಾಂಡೆ, ಎಸ್‌ಪಿ ಎಸ್‌.ಎನ್‌.­ಸಿದ್ದರಾಮಪ್ಪ ಸೇರಿದಂತೆ ಮತ್ತಿತರ ಅಧಿಕಾರಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.