ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಇಲಾಖೆಯು ಕಾರ್ಜೋನ್ರೆಂಟ್ ಸಂಸ್ಥೆಯ ಸಹಯೋಗದೊಂದಿಗೆ ನಗರ ರೈಲು ನಿಲ್ದಾಣದಲ್ಲಿ ಜಿಪಿಆರ್ಎಸ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸೋಮವಾರ ಆರಂಭಿಸಿತು.
ಪ್ರಯಾಣಿಕರು ನಗರ ರೈಲು ನಿಲ್ದಾಣದಿಂದ 43434343 ಈ ಸಂಖ್ಯೆಗೆ ಕರೆ ಮಾಡಿ ಟ್ಯಾಕ್ಸಿಯನ್ನು ಮತ್ತು ತಲುಪುವ ಸ್ಥಳವನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು.
ಈ ಅತ್ಯಾಧುನಿಕ ಸೌಲಭ್ಯವು ಪ್ರಯಾಣಿಕರನ್ನು ಸೂಕ್ತ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಿಸುವಲ್ಲಿ ಸಹಕಾರಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.